ಬರಿಪಾಡಾ: ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯನ್ನು ಪೊಲೀಸರು ಬಿಸಿಲಿನಲ್ಲಿ ಬರೋಬ್ಬರಿ ಮೂರು ಕಿ.ಮೀ ದೂರ ನಡೆಸಿ ಅಮಾನವೀಯ ಕೃತ್ಯ ನಡೆಸಿದ್ದಾರೆ. ಮಯೂರ್ಭಂಜ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಪತಿ ಬಿಕ್ರಮ್ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬೈಕ್ ನ ಹಿಂಬದಿ ಕುಳಿತಿದ್ದ 27 ವರ್ಷದ ಗರ್ಭಿಣಿ ಗುರುಬಿರಿ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ಪಾವತಿಸಲು ಬಿಕ್ರಮ್ ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ಬಿಕ್ರಮ್ ಹೆಲ್ಮೆಟ್ ಧರಿಸಿದ್ದರೆ, ಗುರುಬರಿ ಧರಿಸಿರಲಿಲ್ಲ. ಗುರುಬರಿಯನ್ನು ಸ್ಥಳದಲ್ಲೇ ಬಿಟ್ಟು ದಂಡವನ್ನು ಪಾವತಿಸಲು ಬಿಕ್ರಮ್ ಅವರನ್ನು ಪೊಲೀಸ್ ಠಾಣೆಗೆ ಹೋಗುವಂತೆ ಶರತ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರೀನಾ ಬಕ್ಸಲ್ ಒತ್ತಾಯಿಸಿದರು. ಈ ಘಟನೆಯಿಂದ ಅಸಹಯಕಳಾದ ಒಂಬತ್ತು ತಿಂಗಳ ಗರ್ಭಿಣಿ ತೀವ್ರವಾದ ಬಿಸಿಲಿನಲ್ಲಿ ಪೊಲೀಸ್ ಠಾಣೆಗೆ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿದ್ದರು. ಈ ಘಟನೆ ವರದಿಯಾಗುತ್ತಿದ್ದಂತೆ ಮಯೂರ್ಭಂಜ್ ಎಸ್ಪಿ ಪರ್ಮಾರ್ ಸ್ಮಿಟ್ ಪರಶೋತ್ತಮ್ ದಾಸ್ ಮಹಿಳಾ ಪೊಲೀಸ್ ಅಧಿಕಾರಿ ರೀನಾ ಬಕ್ಸಲ್ ರನ್ನು ಅಮಾನತುಗೊಳಿಸಿದ್ದಾರೆ.