ಪುತ್ತೂರು: ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪೂರ್ವಬಾವಿ ಸಭೆ ನೆಡೆಯಿತು.

ಅರುಣ್ ಕುಮಾರ್ ಪುತ್ತಿಲ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಾಲಯದ ಜಾತ್ರೋತ್ಸವ ಸಮಿತಿ ಗೌರವ ಅಧ್ಯಕ್ಷ ಶ್ರೀರಂಗ ಶಾಸ್ತ್ರೀ ಮಣಿಲ, ಸುಧೀರಶೆಟ್ಟಿ ನೇಸರ, ವ್ಯವಸ್ಥಾಪನಾ ಸಮಿತಿ ಸದಸ್ಯ ಸದಾಶಿವ ಶೆಟ್ಟಿ ಪಟ್ಟೆ, ರಾಮಣ್ಣ ಗೌಡ, ಬಾಲಚಂದ್ರ ಗೌಡ ಕಡ್ಯ, ಅನಿಲ್ ಕಣ್ಣರ್ನೂಜಿ, ಪ್ರಶಾಂತ್ ಆಚಾರ್ಯ, ಜಯಪ್ರಸಾದ್, ಧನಂಜಯ ಕುಲಾಲ್, ಧನಂಜಯ ನಾಯ್ಕ್, ಹರೀಶ್ ಬಿಕೆ, ರಾಘವೇಂದ್ರ, ಸಚಿನ್, ಸದಾಶಿವ ಗೌಡ, ಉಮೇಶ್ ಗುತ್ತಿನಪಾಲು ಶೇಸಪ್ಪ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಭಕ್ತರು ಭಾಗವಹಿಸಿದ್ದರು.
ದೇವಾಲಯದ ಪ್ರಸಾದ್ ಬೈಪಾಡಿತ್ತಾಯ ಸ್ವಾಗತಿಸಿ, ಶ್ರೀರಂಗ ಶಾಸ್ತ್ರಿ ವಂದಿಸಿದರು. ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ವಿಜೃಂಭಣೆಯಿಂದ ಕಾರ್ಯಕ್ರಮ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಗಣೇಶೋತ್ಸವ ಪ್ರಯುಕ್ತ ಕ್ರೀಡಾಕೂಟ ನಡೆಸುವುದೆಂದು ತೀರ್ಮಾನಿಸಲಾಯಿತು.




























