Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

    ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

    ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

    ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಮನೆಯ ಸಿಟೌಟ್‌ಗೆ ಬಂದು ಹಲ್ಲೆ : ಪ್ರಕರಣ ದಾಖಲು..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಬೆಟ್ಟಂಪಾಡಿ: ಸರ ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು..!!

July 18, 2022
in Featured, ಕ್ರೈಮ್, ಪುತ್ತೂರು
0
ಬೆಟ್ಟಂಪಾಡಿ: ಸರ ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಬೆಟ್ಟಂಪಾಡಿ: ತಿಂಗಳ ಹಿಂದೆ ಬೆಟ್ಟಂಪಾಡಿ ಪರಿಸರದಲ್ಲಿ ಹಾಡಹಗಲೇ ಮಹಿಳೆಯ ಕತ್ತಿನಿಂದ ಕರಿಮಣಿ ಸರ ಒಯ್ದ ಸರಗಳ್ಳರನ್ನು ಬೆಟ್ಟಂಪಾಡಿಯ ಯುವಕರೇ ಹೆಡೆಮುರಿ ಕಟ್ಟಿ ಸಾರ್ವಜನಿಕವಾಗಿ ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಜು. 18 ರಂದು ಮಧ್ಯಾಹ್ನ ನಡೆದಿದೆ.

Advertisement
Advertisement

ಯುವಕರ ಧೈರ್ಯ ಮತ್ತು ಸಾಹಸ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಗಿದೆ.

ಇಂದು ಬೆಳಗ್ಗಿನಿಂದಲೇ ಮತ್ತೊಮ್ಮೆ ಕಳ್ಳತನಕ್ಕಾಗಿ ಹೊಂಚುbಹಾಕುತ್ತಿದ್ದ ಕಳ್ಳರನ್ನು ಅನುಮಾನ ಬಂದ ಸ್ಥಳೀಯ ಯುವಕರು ಅಟ್ಟಾಡಿಸಿ ಹಿಡಿದಿದ್ದಾರೆ. ಬಳಿಕ ರೆಂಜ ಸರ್ಕಲ್ ಬಳಿ ಕಟ್ಟಿ ಹಾಕಿ ಸಾರ್ವಜನಿಕವಾಗಿ ಗೂಸಾ ನೀಡಿ ಇದೀಗ ಪೊಲೀಸರಿಗೊಪ್ಪಿಸಿದ್ದಾರೆ.

Advertisement

ಜೂನ್ 7 ರಂದು ಬೆಟ್ಟಂಪಾಡಿ ಕೋನಡ್ಕದ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಬುಲೆಟ್ ಬೈಕ್ ನಲ್ಲಿ ಬಂದಿದ್ದ ಅಪರಿಚಿತರೀರ್ವರು ಮಹಿಳೆಯ ಕತ್ತಿಗೆ ಕೈ ಹಾಕಿ ಕರಿಮಣಿ ಸರ ಒಯ್ದಿದ್ದರು. ಕದಿಯುವ‌ ಮೊದಲು ಈ ಪರಿಸರದಲ್ಲಿ ಸುತ್ತಾಡಿದ್ದರಿಂದ ಸ್ಥಳೀಯ ಯುವಕರಿಗೆ ಅನುಮಾನ ಬಂದು ಪೊಲೀಸರಿಗೂ ತಿಳಿಸಿದ್ದರು. ಆದರೆ ಸರ ಕದ್ದೊಯ್ದ ಕಳ್ಳರು ಪರಾರಿಯಾಗಿದ್ದರು. ಪೊಲೀಸರು ಈ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುತ್ತಾ ಕಳ್ಳರ ಹಿಂದೆ ಬಿದ್ದಿದ್ದರೂ ಅವರ ಪತ್ತೆಯಾಗಿರಲಿಲ್ಲ.

ಜು. 18 ರಂದು ಮತ್ತೆ ಇದೇ ಕಳ್ಳರು ಎಫ್‌ಝಡ್ ಬೈಕ್‌ನಲ್ಲಿ ಬಂದಿದ್ದರೆನ್ನಲಾಗಿದೆ. ಸ್ಥಳೀಯ ಯುವಕರೂ ತಿಂಗಳ ಹಿಂದೆ ನಡೆದ ಸರಗಳ್ಳತನವನ್ನು ಮರೆತಿರಲಿಲ್ಲ. ಒಂದಲ್ಲ ಒಂದು ದಿನ ಕಳ್ಳರು ಸಿಕ್ಕೇ ಸಿಗುತ್ತಾರೆ ಎಂದು ಹದ್ದಿನ ಕಣ್ಣಿಟ್ಟಿದ್ದರು. ಆ ದಿನ ಬಂದೇ ಬಿಟ್ಟಿತು. ಬೈಕ್ ಬದಲಾಯಿಸಿದರೂ ಕಳ್ಳರ ಮುಖ ಪರಿಚಯ ಇಟ್ಟುಕೊಂಡಿದ್ದ ಸ್ಥಳೀಯರಿಗೆ ಅದೇ ಕಳ್ಳರು ಇವರೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ.

ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ:

ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಿಸಿದಂತೆ ಇಲ್ಲಿ ಸಾರ್ವಜನಿಕರೇ ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ಕಾರ್ಯಾಚರಣೆ ಮಾಡಿದ್ದಾರೆ. ಎಫ್‌ಝಡ್ ಬೈಕ್ ನಲ್ಲಿ ಅಪರಿಚಿತ ಮತ್ತು ಅನುಮಾನಾಸ್ಪದ ಈರ್ವರು ಪಾಣಾಜೆ ಕಡೆಯಿಂದ ಪುತ್ತೂರು ಕಡೆಗೆ ಚಲಿಸುತ್ತಿರುವುದನ್ನು ಗಮನಿಸಿ ಆರ್ಲಪದವು ಎಂಬಲ್ಲಿಂದ ರೆಂಜ ಬೆಟ್ಟಂಪಾಡಿ ಪರಿಸರದವರಿಗೆ ಸುಳಿವು ನೀಡಲಾಯಿತು.

ತಕ್ಷಣ ಕಾರ್ಯಪ್ರವೃತ್ತರಾದ ಬೆಟ್ಟಂಪಾಡಿಯ ಯುವಕರು ಮಿತ್ತಡ್ಕ ಕೇಸರಿ ನಗರದಲ್ಲಿ ರಿಕ್ಷಾ ಅಡ್ಡ ಹಾಕಿ ನಿಲ್ಲಿಸಲು ಪ್ರಯತ್ನಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಅವರು ಪುತ್ತೂರು ಕಡೆಗೆ ಹೋಗಿದ್ದರು. ಯುವಕರ ನೆಟ್‌ವರ್ಕ್ ಇಲ್ಲಿ ಕ್ಷಣಾರ್ಧದಲ್ಲಿ ಮಿಂಚಿನ ರೀತಿಯಲ್ಲಿ ಕಾರ್ಯಾಚರಿಸಿತು. ಸಂಟ್ಯಾರ್ ನಲ್ಲಿ ಬೈಕ್ ನ್ನು ಅಡ್ಡಹಾಕಲು ಪ್ರಯತ್ನಿಸಲಾಯಿತು. ಆದರೆ ಅಲ್ಲಿಂದ ತಿರುಗಿ ಹೋದ ಕಳ್ಳರು ಚೆಲ್ಯಡ್ಕದಿಂದ ಗುಮ್ಮಟೆಗದ್ದೆ ದೇವಸ್ಯ ಮಾರ್ಗವಾಗಿ ಮತ್ತೆ ಪುತ್ತೂರಿಗೆ ಬಂದು ಸಂಟ್ಯಾರ್ ಮೂಲಕ ವಾಪಾಸಾಗಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ ಐ ಉದಯರವಿಯವರ ನೇತೃತ್ವದಲ್ಲಿ ಪೊಲೀಸರೂ ಕಳ್ಳರ ಹುಡುಕಾಟದಲ್ಲಿ ನಿರತರಾಗಿದ್ದರು. ಆದರೆ ಪುತ್ತೂರಿನಿಂದ ಸಂಟ್ಯಾರ್ ಮಾರ್ಗವಾಗಿ ವಾಪಸಾಗುತ್ತಿದ್ದಂತೆ ಕಳ್ಳರ ಪ್ಲ್ಯಾನ್ ಕಂಪ್ಲೀಟ್ ಕೈ ಕೊಟ್ಟಿತ್ತು. ಸಂಟ್ಯಾರ್ ನಲ್ಲಿ ಪಾಸಾದ ಬಗ್ಗೆ ಮತ್ತೆ ಬೆಟ್ಟಂಪಾಡಿಯ ಯುವಕರಿಗೆ ಮಾಹಿತಿ ನೀಡಲಾಯಿತು.

ರೆಂಜ ಜಂಕ್ಷನ್ ನಲ್ಲಿ ಯುವಕರು ಪೊಲೀಸ್ ಬ್ಯಾರಿಕೇಡ್ ಎಳೆದು ಅಡ್ಡಹಾಕಿದರು. ಬ್ಯಾರಿಕೇಡ್ ಗೆ ಗುದ್ದಿ ಮಗುಚಿಬಿದ್ದ ಬೈಕ್ ನಿಂದ ಎಗರಿದ ಕಳ್ಳರು ಸ್ಥಳೀಯ ತೋಟದಲ್ಲಿ ಓಡಿ ಪರಾರಿಯಾಗಲು ಯತ್ನಿಸಿದ್ದರು. ಬೆಂಬಿಡದ ಯುವಕರು ಅಟ್ಟಾಡಿಸಿ ಈರ್ವರನ್ನೂ ಹಿಡಿದು ಕಟ್ಟಿಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಮಾಯಿಸಿದ ನೂರಾರು ಮಂದಿ:

ಕಳ್ಳರನ್ನು ಹಿಡಿದ ಸುದ್ದಿ ಹರಡಿದಾಕ್ಷಣ ರೆಂಜ ಜಂಕ್ಷನ್ ನಲ್ಲಿ ನೂರಾರು ಮಂದಿ ಜಮಾಯಿಸಿದ್ದಾರೆ. ಸರಗಳ್ಳರ ಬಗ್ಗೆ ಕುಪಿತರಾಗಿದ್ದ ಕೆಲ ಮಂದಿ ತಮ್ಮ ಕೋಪವನ್ನು ಕೈಚಳಕದಲ್ಲಿಯೂ ತೋರಿಸಿದ್ದಾರೆ ಎನ್ನಲಾಗಿದೆ. ಅಂತೂ ತಿಂಗಳ ಬಳಿಕ ಮತ್ತೆ ತಮ್ಮ ಚಾಳಿಗೆ ಬಂದ ಕಳ್ಳರಿಗೆ ಈ ರೀತಿಯ ಗ್ರಹಸ್ಥಿತಿ ಬರುತ್ತದೆಂದೂ ಕನಸಿನಲ್ಲಿಯೂ ಎಣಿಸದ ಕಳ್ಳರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಒಂದಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೆ ಒಳಗಾದರೆ ಈ ಪರಿಸರದ ಅನೇಕ ಕಳ್ಳತನದ ಪ್ರಕರಣಕ್ಕೆ ಒಂದು ಅಂತ್ಯ ಸಿಗಬಹುದೇನೋ ಎಂಬ ಕುತೂಹಲದಲ್ಲಿದ್ದಾರೆ ಸಾರ್ವಜನಿಕರು.

ಯುವಕರ ಕಾರ್ಯಕ್ಕೆ ಶ್ಲಾಘನೆ

ತಪ್ಪಿಸಿಕೊಂಡು ಪರಾರಿಯಾಗಲೆತ್ನಿಸಿದ ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿರುವ ಯುವಕರ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಮುಕ್ತಕಂಠದ ಶ್ಲಾಘನೆ ವ್ಯಕ್ತವಾಗಿದೆ. ಘಟನೆಯಲ್ಲಿ ಸ್ಥಳೀಯ ಯುವಕನೋರ್ವನ ಕಾಲಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.

Previous Post

ಮುಂಡೂರು: ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪೂರ್ವಬಾವಿ ಸಭೆ

Next Post

ದಲಿತ ಮುಖಂಡ ಡೀಕಯ್ಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕುಟುಂಬಸ್ಥರು: ದಫನ್ ಮಾಡಿದ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು..!!

OtherNews

ಪ್ರೀವೆಡ್ಡಿಂಗ್ ಶೂಟ್‌ಗೆ ಹೋಗುವಾಗ ಅಪಘಾತ : ಹಸೆಮಣೆ ಏರಬೇಕಿದ್ದ ವರ ಧಾರುಣ ಸಾವು..!!
ಕ್ರೈಮ್

ಪ್ರೀವೆಡ್ಡಿಂಗ್ ಶೂಟ್‌ಗೆ ಹೋಗುವಾಗ ಅಪಘಾತ : ಹಸೆಮಣೆ ಏರಬೇಕಿದ್ದ ವರ ಧಾರುಣ ಸಾವು..!!

April 30, 2026
ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!
Featured

ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

April 29, 2026
ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!
Featured

ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

April 29, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ಮನೆಯ ಸಿಟೌಟ್‌ಗೆ ಬಂದು ಹಲ್ಲೆ : ಪ್ರಕರಣ ದಾಖಲು..!!

April 29, 2026
ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!
ಪುತ್ತೂರು

ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

April 29, 2026
ಪುತ್ತೂರು: ಕಾರಿಗೆ ನಕಲಿ ನಂಬರ್ : ಪ್ರಕರಣ ದಾಖಲು..!!
Featured

ಪುತ್ತೂರು: ಕಾರಿಗೆ ನಕಲಿ ನಂಬರ್ : ಪ್ರಕರಣ ದಾಖಲು..!!

April 29, 2026

Leave a Reply Cancel reply

Your email address will not be published. Required fields are marked *

Recent News

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

April 30, 2026
ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

April 30, 2026
ಪ್ರೀವೆಡ್ಡಿಂಗ್ ಶೂಟ್‌ಗೆ ಹೋಗುವಾಗ ಅಪಘಾತ : ಹಸೆಮಣೆ ಏರಬೇಕಿದ್ದ ವರ ಧಾರುಣ ಸಾವು..!!

ಪ್ರೀವೆಡ್ಡಿಂಗ್ ಶೂಟ್‌ಗೆ ಹೋಗುವಾಗ ಅಪಘಾತ : ಹಸೆಮಣೆ ಏರಬೇಕಿದ್ದ ವರ ಧಾರುಣ ಸಾವು..!!

April 30, 2026
(ಮೇ.01): ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22 ನೇ ವರ್ಷದ ನಿರಂತರ ಉಚಿತ ಮಾಸಿಕ ಆರೋಗ್ಯ ತಪಾಸಣಾ ಶಿಬಿರ

(ಮೇ.01): ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22 ನೇ ವರ್ಷದ ನಿರಂತರ ಉಚಿತ ಮಾಸಿಕ ಆರೋಗ್ಯ ತಪಾಸಣಾ ಶಿಬಿರ

April 30, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.