ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರದ ಪಾವಿತ್ರತೆ ಧಕ್ಕೆ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ನಡೆದ ಪ್ರತಿಭಟನೆ ‘ರುದ್ರಗಿರಿಯ ರಣಕಹಳೆ’ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಜಗದೀಶ್ ಕಾರಂತ್ ವಿರುದ್ಧ ಹಾಕಿದ್ದ ಚಾರ್ಜ್ ಶೀಟ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಾರಿಂಜ ಕ್ಷೇತ್ರದ ಪಾವಿತ್ರತೆ ಧಕ್ಕೆ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ನಡೆದ ಪ್ರತಿಭಟನೆ ‘ರುದ್ರಗಿರಿಯ ರಣಕಹಳೆ’ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಜಗದೀಶ್ ಕಾರಂತ್ ವಿರುದ್ಧ ಜಿಲ್ಲಾಧಿಕಾರಿ ದೂರು ನೀಡಿ ಕೇಸು ದಾಖಲಿಸಿದ್ದರು ಹಾಗೂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೇ ಇದೀಗ ಹೈಕೋರ್ಟ್ ಚಾರ್ಜ್ ಶೀಟ್ ಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ..


























