ಮಂಡ್ಯ: ಮಹಿಳೆಯೊಬ್ಬರು ನಾಗರ ಹಾವಿನಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿರುವ ಭಯಾನಕ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಬಳಿ ಇದ್ದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವೀಡಿಯೋದಲ್ಲಿ ಬಾಲಕ ಶಾಲೆಗೆ ಹೊರಟ್ಟಿದ್ದ ವೇಳೆ ಮನೆಯ ಹೊರಗೆ ಮೆಟ್ಟಿಲ ಕೆಳಗೆ ನಾಗರಹಾವು ನುಸುಳಿತ್ತು. ಹಾವು ಇರುವುದನ್ನು ಕಾಣದೇ ಮೆಟ್ಟಿಲಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಹಾವು ಹಿಂದಕ್ಕೆ ಸರಿದಿದೆ. ಇದನ್ನು ಕಂಡ ಕೂಡಲೇ ಬಾಲಕನ ತಾಯಿ ಮೆಟ್ಟಿಲಿನಿಂದ ಇಳಿದು ಹೆಡೆ ಎತ್ತಿದ ನಾಗರಹಾವು ಬಾಲಕನನ್ನು ಕಚ್ಚಲು ಪ್ರಯತ್ನಿಸಿದಾಗ ಮಗನನ್ನು ದೂರಕ್ಕೆ ಎಳೆದೊಯ್ದು ಬಿಗಿದಪ್ಪಿಕೊಂಡು ರಕ್ಷಿಸಿದ್ದಾರೆ.
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಒಟ್ಟಾರೆ ಪ್ರಾಣ ಒತ್ತೆ ಇಟ್ಟು ಮಗನನ್ನು ಹಾವಿನಿಂದ ಪಾರು ಮಾಡಿದ ತಾಯಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ..




























