ಮೈಸೂರು: ಖ್ಯಾತ ಇತಿಹಾಸ ತಜ್ಞ, ಮಂಗಳೂರು ಮತ್ತು ಗೋವಾ ವಿವಿಗಳ ಮಾಜಿ ಉಪಕುಲಪತಿ ಪ್ರೊ. ಬಿ ಶೇಖ್ ಅಲಿ ಅವರು ಇಹಲೋಕ ತ್ಯಜಿಸಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗುರುವಾರ ಕೊನೆಯುಸಿರೆಳೆದಿದ್ದಾರೆ.
ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪ್ರೊ. ಬಿ ಶೇಖ್ ಅಲಿ ಅವರ ಅಂತಿಮ ವಿಧಿಗಳನ್ನು ಮುಸ್ಲಿಂ ಹಾಸ್ಟೆಲ್ ಮಸೀದಿಯಲ್ಲಿ ನಡೆಸಲಾಗುವುದು, ನಂತರ ಮೈಸೂರಿನ ಮೈಸೂರು ಜೈಲು ಟಿಪ್ಪು ವೃತ್ತದ ಹಿಂಭಾಗದ ಮುಖ್ಯ ಖಬರಸ್ಥಾನದಲ್ಲಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.