ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸೆ.5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲಿಯುತ್ತಿರುವ 10ನೇ ತರಗತಿಯ ವಿದ್ಯಾರ್ಥಿಗಳು ಎಲ್ಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಗುರುವಂದನಾ ಕಾರ್ಯಕ್ರಮವನ್ನು ನೆರವೇರಿಸಿದರು. ಜೊತೆಗೆ ಈ ಸಂಸ್ಥೆಯಲ್ಲಿ ಸುಮಾರು 20 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರಿಗೆ ಫಲ ಪುಷ್ಪಗಳನಿತ್ತು, ಶಾಲು ಹೊದಿಸಿ ವಿಶೇಷವಾಗಿ ಅಭಿನಂದಿಸಲಾಯಿತು.
ಐಡ ಲಸ್ರಾದೋ, ಜಯರಾಮ ರೈ, ಜ್ಯೋತಿ ಶೆಣೈ, ಬೀನಾ ರೊಡ್ರಿಗಸ್ ಹಾಗೂ ದೇವಿಕಾ ರವರನ್ನು ಗೌರವಿಸಲಾಯಿತು.
ಶಿಕ್ಷಕರು ಕೇವಲ ಪಠ್ಯ ವಿಷಯ ಮಾತ್ರವಲ್ಲದೆ, ಹಾಡು ನೃತ್ಯ ಹಾಗೂ ವಿವಿಧ ಆಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಠ್ಯೇತರ ವಿಷಯಗಳಲ್ಲೂ ಕೂಡ ಸೈ ಎನಿಸಿಕೊಂಡು ಮಕ್ಕಳ ಮನೆಗೆದ್ದರು. ಮನೋರಂಜನ ಆಟವಾದ ಶಿಕ್ಷಕರ ಹಗ್ಗ ಜಗ್ಗಾಟವನ್ನು ವೀಕ್ಷಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಖುಷಿಪಟ್ಟರು.
ಹತ್ತನೇ ತರಗತಿಯ ವಿದ್ಯಾರ್ಥಿಗಳ ಆದರ್ಶ ಮರಡಿತ್ತಾಯ ದಿನದ ವಿಶೇಷತೆಯನ್ನು ತಿಳಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಶಿಕ್ಷಕಿ ಸಂಧ್ಯಾ ಹಾಗೂ ದೇವಿಕಾರ ಮಾರ್ಗದರ್ಶನದಂತೆ ಸಂಯೋಜಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಎಲ್ಲಾ ಶಿಕ್ಷಕರಿಗೆ ಶುಭ ಹಾರೈಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಶಾಲಾ ಪ್ರಾಂಶುಪಾಲರಾದ ಜಯರಾಮ್ ರೈ ರವರು ಬಹುಮಾನ ವಿತರಿಸಿದರು.