ಪುತ್ತೂರು: ರೈಲಿನಲ್ಲಿ ಆಗಮಿಸುತ್ತಿದ್ದ ಹಿಂದೂ ಯುವತಿಯರಿಗೆ ಅನ್ಯಕೋಮಿನ ಯುವಕರ ಜೊತೆ ಸಂಪರ್ಕವಿದೆಯೆಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಕೆಲ ಹಿಂದೂ ಯುವತಿಯರು ಮತ್ತು ಅನ್ಯಕೋಮಿನ ಯುವಕರು ಸುಬ್ರಹ್ಮಣ್ಯದಿಂದ ಆಗಮಿಸುತ್ತಿದ್ದ ರೈಲಿನ ಒಂದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದು, ಅದರಲ್ಲಿದ್ದ ಓರ್ವ ಯುವತಿಗೆ ಅನ್ಯಕೋಮಿನ ಯುವಕರ ಜೊತೆ ಸಂಪರ್ಕವಿದೆಯೆಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ರೈಲು ನಿಲ್ದಾಣದ ಬಳಿ ಜಮಾಯಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನ್ಯಕೋಮಿನ ಯುವಕರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅನ್ಯಕೋಮಿನ ಯುವಕರ ಜೊತೆ ಸಂಪರ್ಕವಿದೆ ಎಂದು ಆರೋಪಿಸಲಾದ ಯುವತಿಯು ಕಾಣಿಯೂರು ನಲ್ಲಿ ಇಳಿದು ಹೋಗಿದ್ದಾಳೆ ಎನ್ನಲಾಗುತ್ತಿದ್ದು., ಅನ್ಯಕೋಮಿನ ಯುವಕರನ್ನು ಮಾಣಿ ಮೂಲದವರೆಂದು ಹೇಳಲಾಗುತ್ತಿದೆ..