ಬಿಗ್ ಬಾಸ್ ಓಟಿಟಿ 42 ದಿನಗಳ ಆಟಕ್ಕೆ ತೆರೆಬಿದ್ದಿದೆ. ಅಭಿಮಾನಿಗಳ ಪ್ರೀತಿ ಮತ್ತು ವೋಟ್‌ನಿಂದ್ ಬಿಗ್ ಬಾಸ್ ಮನೆಯ ಟಾಪರ್ ಆಗಿ ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಸೀಸನ್ 9ಕ್ಕೆ ರೂಪೇಶ್ ಶೆಟ್ಟಿ ಆಯ್ಕೆ ಆಗಿದ್ದಾರೆ.
ಕರಾವಳಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಹಾಡು, ಡ್ಯಾನ್ಸ್, ಅಡುಗೆ, ಟಾಸ್ಕ್ ಎಲ್ಲದರಲ್ಲೂ ರೂಪೇಶ್ ಸೈ ಎನಿಸಿಕೊಂಡಿದ್ದಾರೆ. ಅವರ ವಿಶಿಷ್ಟ ವ್ಯಕ್ತಿತ್ವದಿಂದ ಕರ್ನಾಟಕದ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಅಭಿಮಾನಿಗಳ ವೋಟ್‌ನಿಂದ ಟಾಪರ್ ಆಗಿ ಬಿಗ್ ಬಾಸ್ ಓಟಿಟಿ ಟಾಪರ್ ಗೆಲುವಿನ ಪಟ್ಟ ಪಡೆದಿದ್ದಾರೆ. ಟಾಪರ್ ರೂಪೇಶ್ ಶೆಟ್ಟಿ ಅವರಿಗೆ 5 ಲಕ್ಷ ಬಹುಮಾನ ಕೂಡ ಸಿಕ್ಕಿದೆ.
ತುಳು ಮತ್ತು ಕನ್ನಡ ಚಿತ್ರಗಳ ಮೂಲಕ ಮೋಡಿ ಮಾಡಿದ್ದ ನಟ ರೂಪೇಶ್ ಬಿಗ್ ಬಾಸ್ ಓಟಿಟಿಯ ಟಾಪರ್ ಆಗಿ ಹೊರಹೊಮ್ಮಿದ್ದರು. ಈಗ ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಬಿಗ್ ಬಾಸ್ ಸೀಸನ್ 9ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸೆಪ್ಟೆಂಬರ್ 24ಕ್ಕೆ ಟಿವಿ ಬಿಗ್ ಬಾಸ್ ಶುರುವಾಗಿದೆ. ಇನ್ನು ಓಟಿಟಿ ಮೂಲಕ ಕಮಾಲ್ ಮಾಡಿದ್ದ ರೂಪೇಶ್ ಶೆಟ್ಟಿ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಡೈರೆಕ್ಟ್ ಎಂಟ್ರಿ ಪಡೆದಿದ್ದಾರೆ.