ಪುತ್ತೂರು: ಕಾಮಗಾರಿಯ ಸಂದರ್ಭದಲ್ಲಿ ಧರೆ ಕುಸಿದು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಿಬ್ಬರು ಗಾಯಗೊಂಡಿರುವ ಘಟನೆ ಸೆ.16 ರಂದು ಸಂಜೆ ಪುರುಷರಕಟ್ಟೆಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಾದ ರಾಜೇಶ್(32ವ.) ಹಾಗೂ ಅಶಿತ್ ಮಂಡೇಲಾ(21ವ.) ಗಾಯಗೊಂಡವರು.
ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಧರೆ ಕುಸಿದು ಅವರಿಬ್ಬರೂ ಗಾಯಗೊಂಡಿದ್ದು, ಗಾಯಾಳುಗಳ ಪೈಕಿ ರಾಜೇಶ್ ತೀವ್ರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಶಿತ್ ಮಂಡೆಲಾ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.