ಪುತ್ತೂರು: ಈಶ್ವರಮಂಗಲ ಗ್ರಾಮದ ಬೆದ್ರಾಡಿ ಹಾಗೂ ಮೈಂದನಡ್ಕ ಸಮೀಪ ರಾತ್ರಿ ನಿಲ್ಲಿಸಿದ್ದ ಲಾರಿಗಳ ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿದ ಘಟನೆ ನಡೆದಿದೆ.
ಮೇ 15, 2026ರ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗಳನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳು ಬ್ಯಾಟರಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ಚಾಲಕರು ಹಾಗೂ ಮಾಲೀಕರು ವಾಹನ ಪರಿಶೀಲನೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.


























