ಪುತ್ತೂರು : ಪ್ರಧಾನಿ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಪುತ್ತೂರಿನಲ್ಲಿ ಅತಿ ದೊಡ್ಡ 20 ಅಡಿ ಎತ್ತರದ ಫ್ಲೆಕ್ಸ್ ಅಳವಡಿಸಲಾಗಿದೆ.

ಟೀಮ್ ಮೋದಿ ಬನ್ನೂರು ಸತತ 5 ವರ್ಷಗಳಿಂದ ಈ ಫ್ಲೆಕ್ಸ್ ಅನ್ನು ಅಳವಡಿಸುತ್ತಿದ್ದು ಈ ಬಾರಿ 20 ಅಡಿ ಎತ್ತರದ ಫ್ಲೆಕ್ಸ್ ಬನ್ನೂರಿನಲ್ಲಿ ಕಂಗೊಳಿಸುತ್ತಿದೆ.
ಈ ಫ್ಲೆಕ್ಸ್ ಅನ್ನು ಬನ್ನೂರಿನ ಸರ್ಕಲ್ ಬಳಿ ಅಳವಡಿಸಲಾಗಿದ್ದು ನೋಡುಗರನ್ನು ಆಕರ್ಷಿಸುತ್ತಿದೆ.