ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ನಿ.ವಿಟ್ಲ ಇದರ ವಾರ್ಷಿಕ ಮಹಾಸಭೆ ಸೆ.16 ರಂದು ಪೊನ್ನೊಟ್ಟು ಶಿವಗಿರಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 52,37,57,382ಕೋ. ವ್ಯವಹಾರ ನಡೆಸಿ,37,62,455 ರೂ.ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಸಂಘದ ಲಾಭಾಂಶದ ಶೇ.10 ಡಿವಿಡೆಂಡ್ ವಿತರಿಸಲಿದೆ ಎಂದು ಘೋಷಿಸಿದರು.

ಹೊಸ ಶಾಖೆ ತೆರೆಯುವ ಬಗ್ಗೆ, ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಸಹಕಾರಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಾದ ಹೆಚ್. ಜಗನ್ನಾಥ ಸಾಲ್ಯಾನ್, ಚೆನ್ನಪ್ಪ ಪೂಜಾರಿ, ನರ್ಸಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ ವಿದ್ಯಾರ್ಥಿ ಸಾಧಕರನ್ನು ಪುರಸ್ಕರಿಸಲಾಯಿತು.

ಸಂಘದ ಉಪಾಧ್ಯಕ್ಷ ಬಾಬು ಕೆ.ವಿ, ನಿರ್ದೇಶಕರಾದ ಡಾ.ಗೀತ ಪ್ರಕಾಶ್, ರಮೇಶ್ ಕುಮಾರ್, ಜಗದೀಶ ಪಾಣೆಮಜಲು, ರಾಘವ ಪೂಜಾರಿ, ಸಂಜೀವ ಪೂಜಾರಿ ಎಂ., ಅಭಿಜಿತ್ ಜೆ, ರವಿ ಬಿ.ಕೆ, ಮಾಧವ ಪಟ್ಲ., ಶ್ರೀಧರ್ ಬಾಳೆಕಲ್ಲು, ವನಿತಾ ಚಂದ್ರಹಾಸ, ಪುಷ್ಪಾ.ಎಸ್ ಉಪಸ್ಥಿತರಿದ್ದರು.

ನಿರ್ದೇಶಕ ಶ್ರೀಧರ ಬಾಳೆಕಲ್ಲು ಸ್ವಾಗತಿಸಿದರು. ಉಪಾಧ್ಯಕ್ಷ ಬಾಬು ಕೆ.ವಿ ವಂದಿಸಿದರು. ಕಾರ್ಯನಿರ್ವಾಹಣಾಧಿಕಾರಿ ಜಯಂತ್ ಪಿ.ಆಯವ್ಯಯ ವರದಿ ಮಂಡಿಸಿದರು. ಸಿಬ್ಬಂದಿಗಳಾದ ನಿಶ್ಮಿತಾ ಎಸ್.ಡಿ, ಸಚಿತ್ ಕುಮಾರ್ ಲಾಭನಷ್ಟದ ತಖ್ತೆಯನ್ನು ವಾಚಿಸಿದರು. ಸಿಬ್ಬಂದಿ ಜಗನ್ನಾಥ ಪುಣಚ ಕಾರ್ಯಕ್ರಮ ನಿರೂಪಿಸಿದರು.



