ಪುತ್ತೂರು: ‘ಪಿಲಿ ಭಾಸ್ಕರ’ ಖ್ಯಾತಿಯ ಭಾಸ್ಕರ ಜೋಗಿ (58) ರವರು ಅನಾರೋಗ್ಯದಿಂದಾಗಿ ಸೆ.16 ರಂದು ನಿಧನರಾದರು.

ಜಿಡೆಕಲ್ಲು ನಿವಾಸಿಯಾಗಿದ್ದ ಭಾಸ್ಕರ ರವರು ಪ್ರಸ್ತುತ ದೇವಸ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಭಾಸ್ಕರ ಜೋಗಿ ರವರು ಸತತ 25 ವರ್ಷಗಳ ಕಾಲ ಪಿಲಿ ರಾಧಣ್ಣ ನವರ ಜೊತೆ ಹುಲಿ ವೇಷ ಹಾಕುತ್ತಿದ್ದು, ಪುತ್ತೂರಿನಾದ್ಯಂತ ಪಿಲಿ ಭಾಸ್ಕರ ಎಂದೇ ಖ್ಯಾತರಾಗಿದ್ದರು. 3 ವರ್ಷಗಳಿಂದ ಅವರು ಹುಲಿ ವೇಷ ಹಾಕುವುದನ್ನು ನಿಲ್ಲಿಸಿದ್ದರು.
ಮೃತರು ಪತ್ನಿ, ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
