ವಿಟ್ಲ: ಆಟೋ ಚಾಲಕ ಮಾಲಕ ಸಂಘದ (ಆರ್.ಸಿ. ಎಂ. ಎಸ್) ಗೌರವಾಧ್ಯಕ್ಷರಾಗಿ ಸಂದೇಶ್ ಶೆಟ್ಟಿ ಬಿಕ್ನಾಜೆ ರವರನ್ನು ಆಯ್ಕೆ ಮಾಡಲಾಯಿತು.
ಸೆ.19 ರಂದು ನಡೆದ ರಿಕ್ಷಾ ಚಾಲಕ ಮಾಲಕರ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಬಿ. ಸಂದೇಶ್ ಶೆಟ್ಟಿ ರನ್ನು ಗೌರವಾಧ್ಯಕ್ಷರಾಗಿ ನೇಮಕ ಮಾಡುವುದಾಗಿ ತೀರ್ಮಾನಿಸಲಾಯಿತು.
ಅಧ್ಯಕ್ಷರಾಗಿ ಹರಿಣಾಕ್ಷ ರಾದುಕಟ್ಟೆ, ಉಪಾಧ್ಯಕ್ಷರಾಗಿ ಮಾಧವ ಬೆದ್ರಕಾಡು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಟಿ ಎಂ ಕೋಡಂಗಾಯಿ, ಹಾಗೂ ಕೋಶಾಧಿಕಾರಿಯಾಗಿ ನಾಗೇಶ್ ಪೂರ್ಲಪಾಡಿ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಕಡಂಬು,ಹಾಗೂ ಸುಮಾರು 50 ಜನರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು.