ಬಂಟ್ವಾಳ: ‘ಚಡ್ಡಿಗಳೇ ಎಚ್ಚರ ಪಿ.ಎಫ್.ಐ.ನಾವು ಮರಳಿ ಬರುತ್ತೇವೆ’ ಈ ರೀತಿಯಲ್ಲಿ ಎಚ್ಚರಿಕೆಯ ಸಂದೇಶವನ್ನು ರಸ್ತೆಯಲ್ಲಿ ಬರೆದ ಘಟನೆ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಯಾರೋ ಕಿಡಿಗೇಡಿಗಳು ರಸ್ತೆಯಲ್ಲಿ ಬಹಿರಂಗ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದ್ದು, ‘ಚಡ್ಡಿಗಳೆ ಎಚ್ಚರ ನಾವು ಮರಳಿ ಬರುತ್ತೇವೆ’ ಎಂದು ರಸ್ತೆಯಲ್ಲಿ ಬರೆದುಕೊಂಡಿದ್ದಾರೆ. ಸ್ಥಳೀಯರು ಪುಂಜಾಲಕಟ್ಟೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಎಂಬಲ್ಲಿ ರಸ್ತೆಯ ಮೇಲೆ ಬಳಪದಲ್ಲಿ ಬರೆದಿರುವ ಬರಹ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ..

























