ಸುಬ್ರಹ್ಮಣ್ಯ: ಗೋಣಿ ಚೀಲದಲ್ಲಿ ಕಟ್ಟಿದ ದನದ ರುಂಡ ಪತ್ತೆಯಾದ ಘಟನೆ ಐನೆಕಿದು ಗ್ರಾಮದ ಕೊಪ್ಪಲಗದ್ದೆ ಸೇತುವೆ ಬಳಿ ನಡೆದಿದೆ.
ಯಾರೋ ಕಿಡಿಗೇಡಿಗಳು ದನದ ತಲೆ ಕಡಿದು ಈ ಸ್ಥಳದಲ್ಲಿ ಬಿಸಾಡಿ ಹೋಗಿರುವುದಾಗಿ ಹೇಳಲಾಗುತ್ತಿದೆ. ಸುಬ್ರಹ್ಮಣ್ಯ ಠಾಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
ಸುಬ್ರಹ್ಮಣ್ಯ ಪಶು ವೈದ್ಯಾಧಿಕಾರಿಗಳು ದನದ ರುಂಡದ ಪೋಸ್ಟ್ ಮಾರ್ಟಂ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.