ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ 15ನೇ ವರ್ಷದ ಮೂರು ದಿನಗಳ ಶಾರದೋತ್ಸವದ ಆಚರಣೆಗೆ ವಿಜ್ರಂಭಣೆಯ ಚಾಲನೆ ದೊರೆಯಿತು.

ಪ್ರಥಮ ದಿನದ ಪೂಜೆಯನ್ನು ವೇದಮೂರ್ತಿ ಸುಬ್ರಹ್ಮಣ್ಯ ಹೊಳ್ಳ ರವರ ನೇತೃತ್ವದಲ್ಲಿ ಅರ್ಚಕರಾದ ವಿಕ್ರಮ ರಾಜ್ ರವರು ನಡೆಸಿಕೊಟ್ಟರು. ಪೂಜೆಯ ಬಳಿಕ 153ನೇ ವರ್ಷದ ಗಾಂಧಿ ಜಯಂತಿಯನ್ನು ಬಾಪೂಜಿಯವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಆಚರಿಸಲಾಯಿತು.

ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರಮೀಳಾ ಎನ್ ಡಿ ಅವರು ಗಾಂಧೀಜಿಯಂತಿಯ ಆಚರಣೆ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರು, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


























