ಪುತ್ತೂರು : ತುಳುನಾಡಿನ ಕಾರಣಿಕ ಪುರುಷರಾದ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನದಲ್ಲಿ ಏ.22ರಿಂದ 24ರ ತನಕ ನಡೆಯಲಿರುವ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಆಮಂತ್ರಣ ವಿತರಣಾ ಕಾರ್ಯಕ್ರಮವು ಏ.9 ರಂದು ಬೆಳಿಗ್ಗೆ ಪುತ್ತೂರು ಪೇಟೆಯಲ್ಲಿ ಜರುಗಲಿದೆ.
ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ವತಿಯಿಂದ ನಮ್ಮ ಪಡುಮಲೆ ಎಂಬ ನಾಮಾಂಕಿತದೊಂದಿಗೆ ನಡೆಯುವ ಆಮಂತ್ರಣ ಪತ್ರ ವಿತರಣೆಯು ಕೊಂಬು ಸರ್ವವಾದ್ಯ ಚೆಂಡೆಗಳ ಮೆರವಣಿಗೆಯೊಂದಿಗೆ ದರ್ಬೆಯಿಂದ ಬೊಳುವಾರು ತನಕ ವಿಜೃಂಭಣೆಯಿಂದ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು ಮತ್ತು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು ಆಮಂತ್ರಣ ಪತ್ರ ವಿತರಣೆಗೆ ಚಾಲನೆ ನೀಡಲಿದ್ದಾರೆ. ಆಮಂತ್ರಣ ವಿತರಣೆಯಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.