ಪುತ್ತೂರು: ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಎ.8ರಂದು ರಾಜ್ಯ ಪಶು ಸಂಗೋಪನಾ ಖಾತೆಯ ಸಚಿವ ಪ್ರಭು ಚೌಹಾಣ್ ಭೇಟಿ ನೀಡಿದರು.
ಎಪ್ರಿಲ್ 24ರಿಂದ 30ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅನ್ನಸಂತರ್ಪಣೆಗೆ ಐವತ್ತು ಸಾವಿರ ರೂ ನೀಡುವುದಾಗಿ ಸಚಿವರು ಈ ವೇಳೆ ಹೇಳಿದರು.ಪ್ರಮುಖರಾದ ಡಾ. ಜಯಪ್ರಕಾಶ್ ಮೋನಡ್ಕ, ಡಾ. ಶಿವಪ್ರಕಾಶ್ ಮೋನಡ್ಕ, ನಿರಂಜನ ರೈ ಮಠಂತಬೆಟ್ಟು, ಗಂಗಾಧರ ಶೆಟ್ಟಿ ಮಠಂತಬೆಟ್ಟು, ಶಶಿಕಲಾ ಶಿವಪ್ರಕಾಶ್ ಮೋನಡ್ಕ, ಜಯಪ್ರಕಾಶ್ ಬದಿನಾರು, ಸುಭಾಷ್ ನಾಯಕ್ ನೆಕ್ಕರಾಜೆ, ಸಂತೋಷ್ ರೈ ಕೆದಿಕಂಡೆಗುತ್ತು, ರಾಜೀವ್ ಶೆಟ್ಟಿ ಕೇದಗೆ, ಪ್ರೀತಮ್ ಶೆಟ್ಟಿ ಕೇದಗೆ ಸಹಿತ ಹಲವರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಪ್ರಾರ್ಥನೆ ಸಲ್ಲಿಸಿದರು.
ಚಿತ್ರ : ಅಶ್ವಿನಿ ಸ್ಟುಡಿಯೋ