ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವು ಶತಮಾನೋತ್ಸವ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಫಾ. ಎರಿಕ್ ಕ್ರಾಸ್ತಾ ಉದ್ಘಾಟಿಸಿದರು. ಫಾ. ಐವನ್ ಮೈಕಲ್ ರೋಡ್ರಗಸ್, ಫಾ. ಸುನಿಲ್ ಪಿಂಟೊ, ಸಿಸ್ಟರ್ ಜಾನೆಟ್ ಡಿ ಸೋಜಾ. ಸಿಸ್ಟರ್ ಮರೀನಾ, ಮನೋಹರ್ ಲ್ಯಾನ್ಸಿ ಡಿ ಸೋಜಾ, ಲೂವಿಸ್ ಮಸ್ಕರೇನಸ್, ವಿಜಯ್ ಪಾಯಿಸ್, ಚಾರ್ಲಿ ಸಿಕ್ವೆರಾ, ಕ್ಲಾಡಿ ಸೇರಾಜೆ, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.