ಪುತ್ತೂರು: ಮುಂಡೂರು ಶಿವರಾಮ ಕಲ್ಲೂರಾಯ ರವರ ರಬ್ಬರ್ ದಾಸ್ತನು ಇಟ್ಟಿದ್ದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ನ.28 ರಂದು ನಡೆದಿದ್ದು, ಮುಂಡೂರು ವಲಯ ಕಾಂಗ್ರೆಸ್ ವತಿಯಿಂದ ಡಿ.4 ರಂದು ಶ್ರಮದಾನ ನಡೆಸಲಾಯಿತು.

ಬೆಂಕಿ ಬಿದ್ದ ಕೊಟ್ಟಿಗೆಯ ಸಾಮಾಗ್ರಿಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.

ಈ ವೇಳೆ ಮುಂಡೂರು ವಲಯ ಕಾಂಗ್ರೆಸ್ ನ ಅಧ್ಯಕ್ಷರಾದ ಸುಪ್ರೀತ್ ಕಣ್ಣುರಾಯ ಬನಾರಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಸರ್ವೇ ಮುಂಡೂರು ಕೆಮ್ಮಿಂಜೆಯ ಉಸ್ತುವಾರಿಯಾದ ಯಕೂಬ್ ಮುಲಾರ್, ಮುಂಡೂರು 389ನೇ ಯ ಬೂತ್ ನ ಅಧ್ಯಕ್ಷರಾದ ಪದ್ಮಯ್ಯ ನಾಯ್ಕ್ ಬಂಡಿಕಾನ,190ನೇ ಬೂತ್ ನ ಅಧ್ಯಕ್ಷರಾದ ಇಬ್ರಾಹಿಂ ಮುಲಾರ್, ತಿಮ್ಮಪ್ಪ ನಾಯ್ಕ್ ಬಂಡಿಕಾನ, ಸದಾಶಿವ ಗೌಡ ಬನೇರಿ, ಪುತ್ತೂರು ಕಾರ್ಮಿಕ ಘಟಕದ ಸದಸ್ಯರಾದ ಆಸೀಫ್ ಕಂಪ, ಅನಿಶ್ ಕಂಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


























