ಪುತ್ತೂರು: ಕೋವಿಡ್ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸೇವಾದಾರ ಭಕ್ತರನ್ನು ನಿಯಂತ್ರಿಸಲು ಶ್ರೀ ಮಹಾಲಿಂಗೇಶ್ವರ ವರ್ಷಾವಧಿ ಜಾತ್ರೆಯ ಏ.16 ರಂದು ಕೂಡಾ ತುಲಾಭಾರ ಸೇವೆ ಮಾಡಲಾಯಿತು. ದೇವಳದ ನಡೆಯಲ್ಲಿ ಭಕ್ತರು ತಾವು ಹೇಳಿಕೊಂಡ ಹರಕೆಗೆ ಸಂಬಂಧಿಸಿ ತುಲಾಭಾರ ಸೇವೆ ಮಾಡಿದರು.
ಅಕ್ಕಿ, ತೆಂಗಿನಕಾಯಿ, ಬೆಲ್ಲ, ಸಕ್ಕರೆ, ಬಾಳೆಹಣ್ಣು, ಸೀಯಾಳ ಇತ್ಯಾದಿ ಸುವಸ್ತುಗಳಿಂದ ತುಲಾಭಾರ ಸೇವೆ ನೀಡಲಾಯಿತು. ಎ.೧೮ರಂದು ತುಲಾಭಾರ ಸೇವೆ ನಡೆಯಲಿದೆ. ಎ.೧೬ರಂದು ಸುಮಾರು ೪೨ಕ್ಕೂ ಮಿಕ್ಕಿ ತುಲಾಭಾರ ಸೇವೆ ನಡೆದಿದೆ.