ಚೆನ್ನೈ : ಖ್ಯಾತ ತಮಿಳು ನಟ ವಿವೇಕ್ಗೆ ಹೃದಯಾಘಾತ ಸಂಭವಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಚೆನ್ನೈನ ಖಾಸಗೀ ಆಸ್ಪತ್ರೆಗೆ ಆ್ಯಕ್ಟರ್ ವಿವೇಕ್ ದಾಖಲಾಗಿದ್ದು, ಅವರಿಗೆ ಇಂಟೆನ್ಸಿವ್ ಕೇರ್ ಯೂನಿಟ್ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ನಿನ್ನೆ ತಾನೇ ತಮ್ಮ ಮೊದಲ ಕೋವಿಡ್ ಲಸಿಕೆಯನ್ನು ನಟ ವಿವೇಕ್ ಪಡೆದಿದ್ದು.. ಎಲ್ಲರೂ ಲಸಿಕೆ ಪಡೆಯುವಂತೆ ಕರೆ ನೀಡಿದ್ದರು. ಆದ್ರೆ ಸದ್ಯ ಅವರು ಲಸಿಕೆ ಪಡೆದುಕೊಂಡಿದ್ದಕ್ಕೂ ಹೃದಯಾಘಾತಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ. ವೈದ್ಯರಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.