ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ. ಏ.17 ರಂದು ಶ್ರೀ ಮಹಾಲಿಂಗೇಶ್ವರ ದೇವರು ರಥಾರೂಢನಾಗಿ ಭಕ್ತರಿಗೆ ದರುಶನವನ್ನು ನೀಡಲಿದ್ದಾರೆ.ಈ ಸಂದರ್ಭದಲ್ಲಿ ರಂಗೋಲಿಯೊಂದು ಭಕ್ತರ ಗಮನ ಸೆಳೆಯುತ್ತದೆ. ಸುಮಾರು ನಾಲ್ಕು ವರುಷಗಳಿಂದ ಶಬರಿ ಆರ್ಟ್ಸ್ ತಂಡವು ಪೈಂಟ್ ಮೂಲಕ ಈ ರಂಗೋಲಿಯನ್ನು ಬಿಡಿಸುತ್ತಿದ್ದಾರೆ.
ಸುಧಾಕರ್ ಶೆಟ್ಟಿಯವರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಇದನ್ನು ಆರಂಭಿಸಿದ್ದು ಈಗಲೂ ಅದನ್ನು ಮುಂದುವರೆಸುತ್ತಿದ್ದಾರೆ. ಜಾತ್ರೋತ್ಸವದ ಸಂದರ್ಭದಲ್ಲಿ ಜಗಮಗಿಸುವ ಲೈಟಿಂಗ್ಸ್ ಗಳ ಮಧ್ಯೆ ರಾಜ ಗಾಂಭೀರ್ಯದಿಂದ ನಿಂತಿರುವ ಬ್ರಹ್ಮರಥದ ಮುಂದೆ ಮೂಡಿರುವ ಈ ಚಿತ್ತಾರವು ಹತ್ತೂರ ಒಡೆಯನ ರಥೋತ್ಸವದಲ್ಲಿ ಭಕ್ತರ ಕಣ್ಮನ ಸೆಳೆಯುತ್ತದೆ. ಶಶಿಧರ್ ನೆಲ್ಲಿಕಟ್ಟೆ,ಬಾಲಕೃಷ್ಣ, ಪ್ರಸಾದ್,ಮಂಜುನಾಥ್, ಚೇತನ್, ಪ್ರಶಾಂತ್ ಇಳಂತಿಲ,ಅಚಲ್ ನೆಲ್ಲಿಕಟ್ಟೆ ಇವರುಗಳ ಕೈಚಳಕದಿಂದ ರಥೋತ್ಸವದಂದು ಪ್ರತಿವರ್ಷವೂ ಹೊಸತರಹದ ಚಿತ್ತಾರವು ಮೂಡಿಬರುತ್ತಿದೆ.