ಪುತ್ತೂರು: ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವವು ಡಿ.28 ಮತ್ತು 29 ರಂದು ನಡೆಯಲಿದೆ.
ಡಿ.28 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಮಹಾಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಕಿರುಷಷ್ಠಿ ಉತ್ಸವ ಮತ್ತು ಕಟ್ಟೆ ಪೂಜೆ ನಡೆಯಲಿದೆ.
ಡಿ.29 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಕೂಟೇಲಿನಿಂದ ಭಂಡಾರ ಬಂದು ಹುಲಿಚಾಮುಂಡಿ ನೇಮೋತ್ಸವ ನಡೆಯಲಿದೆ.
ಡಿ.28 ರಂದು ಸಂಜೆ 6 ಗಂಟೆಯಿಂದ ಮಸ್ಕಿರಿ ಕುಡ್ಲ ತಂಡದಿಂದ ಹಾಸ್ಯಮಯ ವಿಭಿನ್ನ ಶೈಲಿಯ ನಾಟಕ ‘ತೆಲಿಕೆ ಬಂಜಿ ನಿಲಿಕೆ’ ಮೂಡಿ ಬರಲಿದೆ..
























