ನವದೆಹಲಿ: ನೀವು ಇತ್ತೀಚೆಗೆ ಡೊಮಿನೋಸ್ ಪಿಜ್ಜಾದಲ್ಲಿ ಆನ್ಲೈನ್ ಆರ್ಡರ್ ಮಾಡಿ ಪಿಜ್ಜಾ ತಿಂದಿದ್ದೀರಾ? ಹಾಗಾದರೆ ಯಾವುದಕ್ಕೂ ಹುಷಾರಾಗಿರಿ. ಏಕೆಂದರೆ ಡೊಮಿನೋಸ್ ಪಿಜ್ಜಾದಲ್ಲಿ ಆನ್ಲೈನ್ ಪಾವತಿ ಮಾಡಿದ ಲಕ್ಷಾಂತರ ಜನರ ಡೇಟಾ ಸೋರಿಕೆಯಾಗಿದೆ ಎಂದು ಸೈಬರ್ ಸೆಕ್ಯುರಿಟಿ ತಂಡವೊಂದು ಮಾಹಿತಿ ನೀಡಿದೆ.
ಹಡ್ಸನ್ ರಾಕ್ ಸೈಬರ್ ಸೆಕ್ಯುರಿಟಿ ಸಂಸ್ಥೆಯ ಮುಖ್ಯಸ್ಥ ಎಲಾನ್ ಗಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡೊಮಿನೋಸ್ನಲ್ಲಿ ಆನ್ಲೈನ್ ಪಾವತಿ ಭಾರತೀಯರಲ್ಲಿ ಸುಮಾರು 10 ಲಕ್ಷ ಮಂದಿಯ ಪಾವತಿ ವಿವರ ಸೋರಿಕೆಯಾಗಿದೆಯಂತೆ. ಅಷ್ಟೇ ಅಲ್ಲದೆ 18 ಕೋಟಿ ಗ್ರಾಹಕರ ಹೆಸರು, ಫೋನ್ ನಂಬರ್, ಇಮೇಲ್, ಅಡ್ರೆಸ್ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಇದೆಲ್ಲ ಮಾಹಿತಿಯನ್ನಿಟ್ಟುಕೊಂಡು ಹ್ಯಾಕರ್ 4 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ಹಡ್ಸನ್ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಕರೊನಾ ವೈರಸ್ ದಾಳಿ ಆರಂಭವಾದಾಗಿನಿಂದ ಸೈಬರ್ ಕ್ರೈಂ ಪ್ರಕರಣಗಳೂ ಹೆಚ್ಚಾಗುತ್ತಲೇ ಸಾಗಿವೆ. ಅನೇಕ ಪ್ರಸಿದ್ಧ ಆನ್ಲೈನ್ ಮಾರ್ಕೆಟಿಂಗ್ ಸಂಸ್ಥೆಗಳ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತಿರುವ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇದೆ. ಆದರೆ ಈ ಕುರಿತಾಗಿ ಡೊಮಿನೋಸ್ ಇನ್ನೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.