ಉಡುಪಿ: ಮಲ್ಪೆಯ ಮೀನುಗಾರರ ಬಲೆಗೆ ಅಪರೂಪದ ‘ಗೋಲ್ಡನ್ ಅಂಜಲ್ ಫಿಶ್’ ಬಿದ್ದಿದೆ. ಅಟ್ಲಾಂಟಿಕ್ ಸರೋವರದಲ್ಲಿ ಹೆಚ್ಚಾಗಿ ಕಂಡುಬರುವ ಈ ಅಪರೂಪದ ಮೀನು ತನ್ನ ಬಂಗಾರ ಬಣ್ಣದಿಂದಲೇ ಆಕರ್ಷನೀಯವಾಗಿದೆ.
ಮಲ್ಪೆ ಕಡಲ ತೀರದ ಮೀನುಗಾರರು ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಇದೇ ವೇಳೆ ಅವರ ಬಲೆಗೆ 16 ಕೆಜಿಯ ಬಂಗಾರ ಬಣ್ಣದ ಮೀನು ಬಿದ್ದಿದೆ.
ದಡಕ್ಕೆ ಈ ಮೀನನ್ನು ತಂದ ಬಳಿಕ ಈ ಅಪರೂಪದ ಮೀನು ಖರೀದಿಗಾಗಿ ಭಾರಿ ಪೈಪೋಟಿ ನಡೆದಿತ್ತು. ಈ ವೇಳೆ ಸುರೇಶ್ ಎನ್ನುವವರು ಕೆಜಿಗೆ 600 ರೂಪಾಯಿಗಳಂತೆ ಇಡೀ ಮೀನನ್ನೇ 9,600 ರೂಪಾಯಿಗೆ ಖರೀದಿ ಮಾಡಿದರು.


























