ಸುಳ್ಯ : ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೋರ್ವರಿಗೆ 40 ಸಾವಿರ ರೂ. ವಂಚಿಸಿರುವ ಘಟನೆ ಸುಳ್ಯದ ಜಾಲ್ಸೂರಿನಲ್ಲಿ ನಡೆದಿದೆ. ಕರೆ ಮಾಡಿದಾತ, ನಾನು ಸುಳ್ಯ ಕೆನರಾ ಬ್ಯಾಂಕ್‌ನಿಂದ ಮಾತನಾಡುತ್ತಿದ್ದೇನೆ. ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ನಂಬರ್ ಬರಲಿದೆ. ಆ ನಂಬರ್ ಅನ್ನು ನನಗೆ ಕೂಡಲೇ ಕೊಡಬೇಕು ಎಂದು ಹೇಳಿದ್ದಾನೆ ಎನ್ನಲಾಗಿದೆ.
ಬಳಿಕ ಮೊಬೈಲ್ ನಂಬರ್ ಬಂದಿದ್ದು, ಅದನ್ನು ಕರೆ ಮಾಡಿದಾತನಿಗೆ ನೀಡಿದ್ದಾರೆ. ಮೊದಲು 30,000 ರೂ, ಎರಡನೇ ಬಾರಿ 9,999 ರೂ ಹಾಗೂ ಮೂರನೇ ಬಾರಿ 999 ರೂ. ಸೇರಿದಂತೆ ಒಟ್ಟು 40,998 ರೂ. ಅನ್ನು ವ್ಯಕ್ತಿ ಕಳೆದುಕೊಂಡಿದ್ದಾರೆ. ಇದಾದ ಬಳಿ ತಾನು ಮೋಸ ಹೋಗಿರುವುದನ್ನು ಅರಿತ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ.