ಪುತ್ತೂರು: ಕೋವಿಡ್ 2 ನೇ ಅಲೆಯ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಕೋವಿಡ್ ನಿಯಮದಂತೆ ಎ.22 ರಿಂದ ಮುಂದಿನ ಆದೇಶದ ತನಕ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
ಶ್ರೀ ದೇವರ ದರ್ಶನ / ಸೇವೆ / ತೀರ್ಥಪ್ರಸಾದ ವಿತರಣೆ / ಅನ್ನಸಂತರ್ಪಣೆ ಇರುವುದಿಲ್ಲ. ದೇವಸ್ಥಾನದಲ್ಲಿ ವಿವಿಧ ಸೇವೆ ನೀಡಲಿಚ್ಚಿಸುವ ಭಕ್ತರು ಆನ್ ಲೈನ್ ಮೂಲಕ ದೇವಳದ ಖಾತೆಗೆ ಹಣ ಸಂದಾಯ ಮಾಡುವ ಮೂಲಕ ಸೇವೆ ಸಲ್ಲಿಸ ಬಹುದು. ಸೇವೆ ಮಾಡಿಸಿದ ಭಕ್ತರಿಗೆ ಅಂಚೆ ಮೂಲಕ ಪ್ರಸಾದ ತಲುಪಿಸಲಾಗುವುದು ಎಂದು ದೇ ವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.