ಬಂಟ್ವಾಳ: ಚತುಷ್ಪದ ರಸ್ತೆಯ ಕಾಮಗಾರಿ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ರಸ್ತೆಯ ತುಂಬೆಲ್ಲಾ ಮಣ್ಣು ಬಿದ್ದು ಧೂಳುಮಯವಾಗಿದೆ. ವಾಹನ ಸವಾರರಿಗೆ, ಸಾರ್ವಜನಿಕರಿಗೆ ಧೂಳಿನಿಂದ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ರಸ್ತೆ ಕಾಮಗಾರಿಯವರು ರಸ್ತೆಗೆ ನೀರನ್ನು ಹಾಯಿಸುತ್ತಿದ್ದು, ಇದರಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ರಸ್ತೆಗೆ ನೀರು ಹಾಯಿಸುವುದರಿಂದಾಗಿ ರಸ್ತೆ ಕೆಸರುಮಯವಾಗಿದ್ದು, ಇದರಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗುತ್ತಿದ್ದು, ಸವಾರರು ಗಾಯಗೊಳ್ಳುವಂತಾಗಿದೆ.
ಫೆ.6 ಕಲ್ಲಡ್ಕದಲ್ಲಿ ಸುಮಾರು 7 ಬೈಕ್ ಗಳು ಸ್ಕಿಡ್ ಆಗಿದ್ದು, ಸವಾರರು ಗಾಯಗೊಂಡಿದ್ದಾರೆ.
ಈ ಬಗ್ಗೆ ಸಂಬಧಪಟ್ಟ ಇಲಾಖೆಯವರು ಗಮನ ಹರಿಸಿ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಮುಂಜಾಗ್ರತಾ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ..