ಪುತ್ತೂರು: ಮುಂಡೂರು ಗ್ರಾಮದ ಪೊನೋನಿ ಲೂಯಿಸ್ ಡಿಸೋಜಾ ಅವರ ಮನೆಯ ಮೇಲ್ಛಾವಣಿ ಕುಸಿದಿದ್ದು, ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಘಟನೆಯ ವೇಳೆ ಮನೆಯ ಸದಸ್ಯರು ಹೊರಗಡೆ ಇದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಮುಂಡೂರು ಗ್ರಾಮದ ಆಡಳಿತ ಅಧಿಕಾರಿ ತುಳಸಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಗೌಡ ಅಂಬಟ ರವರು ಮನೆಯರಿಗೆ ಅಗತ್ಯ ಸಹಕಾರವನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ..