ಪುತ್ತೂರು: ಜಾಗದ ವಿಚಾರವಾಗಿ ಸಂಬಂಧಿಕರ ಮಧ್ಯೆ ಜಗಳ ನಡೆದಿದ್ದು, ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಇತ್ತಂಡ ದವರು ಠಾಣೆಗೆ ದೂರು ನೀಡಿದ ಘಟನೆ ಕೋಡಿಂಬಾಡಿ ಗ್ರಾಮದ ಕಜೆ ಎಂಬಲ್ಲಿ ನಡೆದಿದೆ.
ಕೋಡಿಂಬಾಡಿ ಗ್ರಾಮದ ಕಜೆ ನಿವಾಸಿಯೋರ್ವರು ನೀಡಿದ ದೂರಿನ ಮೇರೆಗೆ ಸುಂದರ ಪಾತಾಜೆ ರವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮತ್ತೊಂದು ತಂಡದವರು ನೀಡಿದ ದೂರಿನ ಮೇರೆಗೆ ಗಿರಿಯಪ್ಪ, ಗೀತಾ, ಶ್ವೇತಾ, ರಂಜಿತಾ, ರಂಜನ್ ಹಾಗೂ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.6 ರಂದು ಬೆಳಿಗ್ಗೆ ದೂರುದಾರರ ಅಣ್ಣನ ಮಕ್ಕಳು ಮತ್ತು ಇತರರು ಜೆಸಿಬಿಯನ್ನು ತಂದು ದೂರುದಾರರ ಸ್ವಾಧೀನದ ಜಾಗವಾದ ಕೋಡಿಂಬಾಡಿ ಗ್ರಾಮದ ಕಜೆ ಎಂಬಲ್ಲಿ ಮಾರ್ಗ ಮಾಡಲು ಬಂದಾಗ ದೂರುದಾರರು ತನ್ನ ಮಕ್ಕಳೆಲ್ಲಾ ಬಂದ ಮೇಲೆ ಮಾತನಾಡಿ ಕೆಲಸ ಮುಂದುವರಿಸಿ ಈಗ ಕೆಲಸ ಮಾಡುವುದು ಬೇಡ ಎಂದು ಹೇಳಿದ್ದು, ಆ ಸಮಯ ಸುಂದರ ಪಾತಾಜೆ ಎಂಬವರು ದೂರುದಾರರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ: 323 ,506,354, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
ಸದರಿ ಪ್ರಕರಣ ಮುಂದುವರಿದ ಭಾಗವಾಗಿ ಪ್ರತಿದೂರು :
ಫೆ.6 ರಂದು ಮಧ್ಯಾಹ್ನ ವೇಳೆ ದೂರುದಾರರು ಜೆ.ಸಿ.ಬಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದು, ಸದ್ರಿ ಸಮಯ ಗಿರಿಯಪ್ಪ, ಗೀತಾ, ಶ್ವೇತಾ, ರಂಜಿತಾ, ರಂಜನ್ ರವರು ಒಟ್ಟು ಸೇರಿ ಹಾಗೂ ಅವರ ಅಕ್ಕ, ಅಣ್ಣ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ದೂರುದಾರರ ಅಕ್ಕ ರವರಿಗೆ ಹಲ್ಲೆ ನಡೆಸಿ ನಂತರ ಗಿರಿಯಪ್ಪ ಹಾಗೂ ಅವರ ಮಗ ರಂಜನ್ ದೂರುದಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆ ಸಮಯ ಗಲಾಟೆ ಬಿಡಿಸಲು ಬಂದ ಸುಂದರ ಪಾತಾಜೆ ಮತ್ತು ಪರಮೇಶ್ವ ರವರಿಗೂ ಕೂಡ ಆರೋಪಿ ಗಿರಿಯಪ್ಪ ಮತ್ತು ರಂಜನ್ ರವರು ಹಲ್ಲೆ ನಡೆಸಿದ್ದಾರೆ. ಆರೋಪಿಗಳ ಹಲ್ಲೆಯಿಂದ ಗಾಯಗೊಂಡ ದೂರುದಾರರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದ ಅಟೋ ಚಾಲಕ ಗಿರಿಯಪ್ಪನಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿರುವುದಾಗಿದೆ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ದೂರುದಾರರ ಅಕ್ಕ ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 323, 354,504,506, ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಸ್ತುತ 2 ಪ್ರಕರಣಗಳೂ ತನಿಖೆಯಲ್ಲಿದೆ..