ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್ ನ ಪುರಭವನ ರಸ್ತೆಗೆ ನಗರೋತ್ಥಾನ ಯೋಜನೆಯಡಿ 9 ಲಕ್ಷದ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನಡೆಯಿತು.
ಮುಖ್ಯಾಧಿಕಾರಿ ಗೋಪಾಲ ನಾಯ್ಕ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗೀತಾ ಜಗದೀಶ ಪಾಣೆಮಜಲು, ರವಿಪ್ರಕಾಶ್, ಜಯಂತ, ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಪ್ರಮುಖರಾದ ಮೋಹನದಾಸ ಉಕ್ಕುಡ, ರಾಮ್ದಾಸ್ ಶೆಣೈ , ಕರುಣಾಕರ ನಾಯ್ತೋಟ್ಟು, ಪ್ರಮುಖರಾದ ನರ್ಸಪ್ಪ ಪೂಜಾರಿ, ಸಂಜೀವ ಪೂಜಾರಿ ನಿಡ್ಯ, ಮಾಜಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸ್ಥಳೀಯರಾದ ಗಮಿ ಮೊಹಮ್ಮದ್, ಶಿವರಾಮ, ಸುರೇಶ ಬನಾರಿ,ರಮನಾಥ ದೇವಾಡಿಗ ಉಪಸ್ಥಿತರಿದ್ದರು.