ವಿಟ್ಲ: ಪ್ರಕರಣಯೊಂದಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮಹಿಳೆಯೊಬ್ಬರನ್ನು ವಿಟ್ಲ ಪೊಲೀಸರು ಕೇರಳದಲ್ಲಿ ವಶಕ್ಕೆ ಪಡೆದ ಘಟನೆ ನಡೆದಿದೆ.
ಕೇರಳ ರಾಜ್ಯದ ಪಯ್ಯನ್ನೂರು ಜಿಲ್ಲೆಯ ಕುಂಞಮಂಗಲ ಪಾಣಚೇರಿ ನಿವಾಸಿ ಸುಜಾತ(42) ಬಂಧಿತ ಆರೋಪಿ.
ಈಕೆಯ ಮೇಲೆ 2013ರಲ್ಲಿ ಕಲಂ: 379,311,406,417, 418, 419, 420.423.427.465,467,468,471,504,506 r/w 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಈಕೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದು, ಈ ಬಗ್ಗೆ LOC ಯನ್ನು ತೆರೆಯಲಾಗಿತ್ತು.
ಆರೋಪಿ ನಿನ್ನೆ ವಿದೇಶದಿಂದ ರಾತ್ರಿ 2-30 ಗಂಟೆಗೆ ಕೇರಳ ರಾಜ್ಯದ ಕೋಝಿಕೊಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು ಇಮಿಗ್ರೇಷನ್ ಅಧಿಕಾರಿಯವರು ಬಂಧಿಸಿ ಮಾಹಿತಿಯನ್ನು ನೀಡಿ
ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ. ಅವರ ಮಾಹಿತಿಯಂತೆ ವಿಟ್ಲ ಪೊಲೀಸ್ ಠಾಣಾ ಎ.ಎಸ್.ಐ. ಜಯರಾಮ ಮತ್ತು ಮಹಿಳಾ ಸಿಬ್ಬಂದಿ ಸಂಗೀತ ಎಂಬವರು ಕೇರಳ ರಾಜ್ಯಕ್ಕೆ ತೆರಳಿ ಆರೋಪಿತೆ ಸುಜಾತ ಎಂಬವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ..