ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.11 ರಂದು ಪುತ್ತೂರಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆ ಪುತ್ತೂರು ಪೇಟೆಗೆ ಆಗಮಿಸುವ ವಾಹನಗಳಿಗೆ ಪರ್ಯಾಯ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಫೆ.11 ಪುತ್ತೂರು ನಗರದ ತೆಂಕಿಲ ವಿವೇಕಾನಂದ ಶಾಲೆ ಮೈದಾನಕ್ಕೆ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಸಮಯ ಪುತ್ತೂರು ಹೊರತುಪಡಿಸಿ ಹೊರಗಡೆಯಿಂದ ಹಲವಾರು ವಾಹನಗಳಲ್ಲಿ ಸದ್ರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಲಿರುವ ನೆಲೆಯಲ್ಲಿ ಪುತ್ತೂರು ಪೇಟೆ ಪರಿಸರಗಳಲ್ಲಿ ವಾಹನಗಳ ದಟ್ಟಣೆ ಉಂಟಾಗುವ ಮೂಲಕ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆ ರಸ್ತೆ ಸಂಚಾರ ರಸ್ತೆಗಳನ್ನು ಬದಲಿಸಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ವಾಹನ ಸಂಚಾರಕ್ಕೆ ಬದಲಿ ರಸ್ತೆ ಈ ಕೆಳಗಿನಂತಿದೆ..:
- ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಲಿನೆಟ್ ಜಂಕ್ಷನ್ ನಿಂದ –
ಮುಕ್ರಂಪಾಡಿಯವರೆಗೂ ಸದ್ರಿ ರಸ್ತೆಯಲ್ಲಿ ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 5.30 ಗಂಟೆಯವರೆಗೂ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸದಂತೆ, ವಾಹನ ಸಂಚಾರ ನಿಷೇಧ. - ಸುಗಮ ಸಂಚಾರದ ದೃಷ್ಟಿಯಿಂದ ಆ ಸಮಯದಲ್ಲಿ ಮಂಗಳೂರು ಕಡೆಯಿಂದ – ಸುಳ್ಯ ಮತ್ತು ಮಡಿಕೇರಿ ಕಡೆ ಹೋಗುವ ವಾಹನಗಳು ಲಿನೆಟ್ ಜಂಕ್ಷನ್ – ಬೊಳುವಾರು ಜಂಕ್ಷನ್ – ದರ್ಬೆ – ಪುರುಷರಕಟ್ಟೆ – ಪಂಜಳ ಪರ್ಪುಂಜ ಮಾರ್ಗವನ್ನು ಬಳಸುವುದು.
- ಮಡಿಕೇರಿ – ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪರ್ಪುಂಜ – ಪಂಜಳ -ಪುರುಷರಕಟ್ಟೆ – ದರ್ಬೆ – ಬೊಳುವಾರು ಜಂಕ್ಷನ್ – ಲಿನೆಟ್ ಜಂಕ್ಷನ್ ಮಾರ್ಗವನ್ನು ಬಳಸುವುದು.
- ಸದ್ರಿ ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸುಗಳನ್ನು ನಿಲ್ಲಿಸಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಮುಂಭಾಗದ ಆವರಣದಲ್ಲಿ ಹಾಗೂ ಸದ್ರಿ ಕಾರ್ಯಕ್ರಮಕ್ಕೆ ಸುಳ್ಯ ಕಡೆಯಿಂದ ಬರುವ ಬಸ್ಸುಗಳನ್ನು ಮುಕ್ರಂಪಾಡಿಯ ಸಾಂತ್ವಂ ಚರ್ಚ್ ಮುಂಭಾಗ ಇರುವ ಖಾಲಿ ಮೈದಾನದಲ್ಲಿ ನಿಲ್ಲಿಸಲು ಹಾಗೂಕಾರುಗಳನ್ನು ನಗರದ ಕಿಲ್ಲೆ ಮೈದಾನ, ಹಾಗೂ ವಿಐಪಿ ವಾಹನಗಳನ್ನು ಗೌಡ ಸಮುದಾಯ ಭವನ ಮತ್ತುಅದರ ಪಕ್ಕ ಇರುವ ಜಾಗದಲ್ಲಿ, ದರ್ಶನ್ ಹಾಲ್ ಮತ್ತು ಪಕ್ಕ ಖಾಲಿ ಜಾಗಗಳಲ್ಲಿ ಪಾರ್ಕಿಂಗ್ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
.