ಪುತ್ತೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ), ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಪುತ್ತೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಆವರಣದಲ್ಲಿ ಫೆಬ್ರವರಿ 10 ಶುಕ್ರವಾರದಿಂದ 12 ಆದಿತ್ಯವಾರದವರೆಗೆ 3 ದಿನಗಳ ಕಾಲ 5ನೇ ಬೃಹತ್ ಕೃಷಿಯಂತ್ರ ಮೇಳ-2023 ಮತ್ತು ಕನಸಿನ ಮನೆ ಪ್ರದರ್ಶನವೂ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಸ್ಟಾಲ್ ಗಳು ಹಾಗೂ ಯಂತ್ರೋಪಕರಣ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ.
ಪುತ್ತೂರು ತಾಲೂಕಿನಲ್ಲಿ 15-20 ವರುಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ‘ದ್ವಾರಕಾ ಕನ್ಸ್ಟ್ರಕ್ಷನ್ ‘ ಸಂಸ್ಥೆಯು ಸ್ಟಾಲ್ ನಂ.23,24 ರಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ.
ಸ್ಟಾಲ್ ಬಹಳ ಆಕರ್ಷಣೀಯವಾಗಿರಲಿದ್ದು, ಇದರಲ್ಲಿ ‘ದ್ವಾರಕಾ ಕನ್ಸ್ಟ್ರಕ್ಷನ್’ ರವರು ಮುಂಬರುವ ದಿನಗಳಲ್ಲಿ ನಿರ್ಮಿಸುವಂತಹ ಬಡಾವಣೆಯ ಮಾಡೆಲ್ ಅನ್ನು ಪ್ರದರ್ಶನಕ್ಕಾಗಿ ಇರಿಸಲಾಗಿದ್ದು, ಅದರ ಬಗ್ಗೆ ಮಾಹಿತಿಯು ಲಭ್ಯವಾಗಲಿದೆ. ಇದು ಗ್ರಾಹಕರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.
15,20 ವರುಷಗಳಿಂದ ಕಾರ್ಯಚರಿಸುತ್ತಿರುವ ಈ ಸಂಸ್ಥೆಯು ಸುಮಾರು 500ಕ್ಕೂ ಅಧಿಕ ಮನೆ ಹಾಗೂ ಬಡಾವಣೆಗಳನ್ನು ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಕಲ್ಪಿಸಿಕೊಟ್ಟಿದ್ದು, ತಮ್ಮ ಉತ್ತಮ ಕಾರ್ಯವೈಖರಿ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೇಳದಲ್ಲಿ ಪ್ರಮುಖ ಆಕರ್ಷಣೀಯವಾಗಲಿದೆ. ಈ ಸ್ಟಾಲ್ ಗೆ ಆಗಮಿಸಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ‘ದ್ವಾರಕಾ ಕನ್ಸ್ಟ್ರಕ್ಷನ್’ ನ ವ್ಯವಸ್ಥಾಪಕರು ತಿಳಿಸಿದ್ದಾರೆ.