ಮಂಗಳೂರು : ನಗರದ ಹಂಪನಕಟ್ಟೆಯಲ್ಲಿರುವ ಆಭರಣ ಮಳಿಗೆಯಲ್ಲಿ ನೌಕರನನ್ನು ಇರಿದು ಕೊಂದ ದುಷ್ಕರ್ಮಿಯ ಇನ್ನಷ್ಟು ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
“ಚಿನ್ನ ಖರೀದಿಸುವವರ ಸೋಗಿನಲ್ಲಿ ಬಂದು ಆಭರಣ ಅಂಗಡಿಯೊಳಗಿನ ಸಿಬಂದಿ ರಾಘವೇಂದ್ರ ಆಚಾರ್ ಅವರನ್ನು ಇರಿದು ಕೊಲೆ ಮಾಡಿದ್ದಾರೆ. ವ್ಯಕ್ತಿಯ ಭಾವಚಿತ್ರವು ಸಿಸಿಟಿವಿಗಳಲ್ಲಿ ದಾಖಲಾಗಿರುವ ಚಿತ್ರಗಳಲ್ಲಿ ಕಂಡುಬಂದಿದ್ದು, ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಲ್ಲಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳ ಮೊಬೈಲ್ ಫೋನ್ ಸಂಖ್ಯೆಗೆ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ.
ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು’ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಮಾಹಿತಿದಾರರು ಈ ಕೆಳಗಿನ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ:
ಎಸಿಪಿ ಸಿಸಿಬಿ, ಮಂಗಳೂರು ನಗರ – ಪಿ ಎ ಹೆಗ್ಡೆ (9945054333)
ಎಸಿಪಿ ಕೇಂದ್ರ ಉಪ ವಿಭಾಗ, ಮಂಗಳೂರು ನಗರ, ಮಹೇಶ್ ಕುಮಾರ್ – (9480805320)