ಪುತ್ತೂರು: ಕೇಂದ್ರ ಸಚಿವರಾದ ಬಳಿಕ ಮೊದಲನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುವ ಅಮಿತ್ ಶಾ ಅವರ ಪುತ್ತೂರಿನ ಸಮಾವೇಶ ಹಾಗೂ ಮಂಗಳೂರಿನ ಸಭೆಗೆ ಭರ್ಜರಿ ಸಿದ್ಧತೆ ನಡೆದಿದೆ.
ಅಮಿತ್ ಶಾ ಅವರು ಈಶ್ವರಮಂಗಲಕ್ಕೆ ಮಧ್ಯಾಹ್ನ 1.45ಕ್ಕೆ ಆಗಮಿಸಿ, ಅರ್ಧ ತಾಸು ಸರಳ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಪರಾಹ್ನ 3ಕ್ಕೆ ಪುತ್ತೂರಿನ ತೆಂಕಿಲದಲ್ಲಿ ನಡೆಯುವ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಸಹಕಾರಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ ನಡೆಯುವ ಕಾರ್ಯಕ್ರಮವನ್ನು ವೀಕ್ಷಿಸಲು ನೂರಾರು ಮಂದಿ ಆಗಮಿಸುತ್ತಿದ್ದು, ಸುಮಾರು 10,20 ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗಿಂತಲೂ ಹೆಚ್ಚು ಬಸ್ ಗಳಲ್ಲಿ ಜಿಲ್ಲೆಯ ಹಲವು ಕಡೆಗಳಿಂದ ಆಗಮಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಗಾರರು, ಸಹಕಾರಿಗಳು, ಬಿಜೆಪಿ ಕಾರ್ಯಕರ್ತರು ಸೇರಿದಂತೆ 1 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ.
ಅಲ್ಲಲ್ಲಿ ಎಲ್‌ಇಡಿ ಪರದೆ ಹಾಕುವ ಮೂಲಕ ಎಲ್ಲರಿಗೂ ಭಾಷಣ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ ಭೇಟಿಯನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಪುತ್ತೂರು ಸಮಾವೇಶದ ಬಳಿಕ ಅಮಿತ್ ಶಾ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಜೆ 5ಕ್ಕೆ ಆಗಮಿಸುವರು. ಕೆಂಜಾರು ಜಂಕ್ಷನ್‌ನಲ್ಲಿ ಸಂಜೆ 4ಕ್ಕೆ ಸಮಾವೇಶಗೊಳ್ಳುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ..