ಪುತ್ತೂರು: ಅಕ್ರಮ ಗೋ ಸಾಗಾಟವನ್ನು ತಡೆದ ಹಿಂದೂ ಕಾರ್ಯಕರ್ತರು ಜಾನುವಾರುಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಆರ್ಲಪದವಿನಲ್ಲಿ ನಡೆದಿದೆ.
ಆಪೆ ವಾಹನದಲ್ಲಿ ದನ ಹಾಗೂ ಗಂಡು ಕರುವನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ.
ಕಾರ್ಯಕರ್ತರು ಈ ಬಗ್ಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಪಂದಿಸಿದ ಅರುಣ್ ಕುಮಾರ್ ಪುತ್ತಿಲ ರವರು ಸ್ಥಳಕ್ಕೆ ಆಗಮಿಸಿ ಪೊಲೀಸರೊಂದಿಗೆ ಮಾತುಕತೆ ನಡೆಸಿ, ದನಗಳನ್ನು ಪೊಲೀಸರಿಗೊಪ್ಪಿಸಿದ್ದು, ಮುಂದೆ ಈ ಸ್ಥಳದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದನ ಸಾಗಾಟದ ಬಗ್ಗೆ ನರಿಮೊಗರು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನೀಡಲಾದ ಒಪ್ಪಿಗೆ ಪತ್ರವೊಂದಿದ್ದು ಜಾನುವಾರುಗಳನ್ನು ಸಾಕಲು ತೆಗೆದುಕೊಂಡು ಹೋಗುವುದಾದರೆ ಪಶು ವೈದ್ಯರ ಸಹಿ ಆಗಬೇಕಿತ್ತು. ಆದರೇ ಅಕ್ರಮ ಗೋ ಸಾಗಾಟಕ್ಕೆ ಕುಮ್ಮಕ್ಕು ನೀಡಲು ನರಿಮೊಗರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕೃಷ್ಣರಾಜ್ ಎಂಬವರು ಪರ್ಮಿಷನ್ ಕೊಟ್ಟು ಅಧಿಕಾರದ ದುರುಪಯೋಗ ಮಾಡಿರುವುದಾಗಿ ಹಾಗೂ ಗೋ ಹತ್ಯೆಗೆ ಪ್ರಚೋದನೆ ಕೊಟ್ಟದಕ್ಕಾಗಿ ಅವರ ಮೇಲೆ ಎಫ್.ಐ.ಆರ್ ಮಾಡಬೇಕು ಎಂದು ಸಾರ್ವಜನಿಕರು ಮತ್ತು ಕಾರ್ಯಕರ್ತರು ಆಗ್ರಹಿಸಿದ್ದಾರೆ..