ಪುತ್ತೂರು: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಘಟನೆ ಕಬಕ – ಪುತ್ತೂರು ರೈಲ್ವೇ ನಿಲ್ದಾಣದ ಸಮೀಪ ಟ್ರ್ಯಾಕ್ ನ ಬಲ ಬದಿಯಲ್ಲಿ ನಡೆದಿದೆ.

ಕಬಕ – ಪುತ್ತೂರು ರೈಲ್ವೇ ನಿಲ್ದಾಣದ ಸಮೀಪ ಟ್ರ್ಯಾಕ್ ನ ಬಲ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಮಗುಚಿ ಬಿದ್ದ ರೀತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಸಾವನ್ನಪ್ಪಿ ಸುಮಾರು ದಿನಗಳೇ ಕಳೆದಿದೆ ಎನ್ನಲಾಗುತ್ತಿದೆ. ಮೃತದೇಹ ಕೊಳೆತ ಕಾರಣ ಸರಿಯಾದ ರೀತಿಯ ಗುರುತು ಸಹ ಪತ್ತೆಯಾಗುತ್ತಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು, ರೈಲ್ವೇ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..