ಪುತ್ತೂರು: ನಗರ ಪೊಲೀಸ್ ಠಾಣಾ ಅಕ್ರ ನಂ. 109/2017 u/s 454 ,380 r/w 34 ಐಪಿಸಿ (ನ್ಯಾಯಲಯದ ಸಿ ಸಿ ನಂಬರ್ 144/2018) ಪ್ರಕರಣದಲ್ಲಿ ಸುಮಾರು 4 ವರ್ಷದಿಂದ ತಲೆ ಮರೆಸಿಕೊಂಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಮಂಜೇಶ್ವರ ತಾಲೂಕು ಉಪ್ಪಳ ಯಾಸ್ಮಿನ್ ಮಂಜಿಲ್ ಹಿರಂಗಳ್ಳಿ ನಿವಾಸಿ ಸಯ್ಯದ್ ಜಂಶೀರ್ ತಂಗಳ್ (ಜಂಶೀರ್ ತಂಗಳ್) ಬಂಧಿತ ಆರೋಪಿ.
ಈತನು ಆಂಧ್ರಪ್ರದೇಶದಲ್ಲಿದ್ದು, ಮನೆಗೆ ಬಂದಿರುವ ಮಾಹಿತಿ ಸಂಗ್ರಹಿಸಿ ಫೆ.25 ರಂದು ರಾತ್ರಿ ವೇಳೆ ಪುತ್ತೂರು ಠಾಣಾ ಪೊಲೀಸ್ ನೀರಿಕ್ಷಕರು ಮತ್ತು ಉಪ ನೀರಿಕ್ಷಕರ ಮಾರ್ಗದರ್ಶನದಲ್ಲಿ, ಎಎಸ್ಐ ಚಂದ್ರ, ಹೆಚ್.ಸಿ ಪರಮೇಶ್, ಹೆಚ್.ಸಿ ರಾಧಾಕೃಷ್ಣ ಕಾಸರಗೋಡು ಮಂಜೇಶ್ವರದಿಂದ ದಸ್ತಗಿರಿ ಮಾಡಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.