ಪುತ್ತೂರು:-ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದ.ಕ.ಜಿಲ್ಲಾ ಗೃಹರಕ್ಷಕದಳದ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರ ಸೂಚನೆಯಂತೆ ಪುತ್ತೂರು ನಗರ ಸಭೆ ಪೌರಯುಕ್ತರು ರೂಪ ಶೆಟ್ಟಿ ಅಧಿನದಲ್ಲಿ ಆರೋಗ್ಯ ಇಲಾಖೆಯ ಜೊತೆ ಸಾರ್ವಜನಿಕರಿಗೆ ಕೋರೋನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೋವೀಡ್ ಮಾರ್ಷಲ್ ಗಳು ಕರ್ತವ್ಯ ಕ್ಕೆ ಹಾಜರಾಗಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನೀರಿಕ್ಷಕರಾದ ರಾಮಚಂದ್ರ,ಶ್ವೇತಾ ಕಿರಣ್, ಚಲಕರದ ರಾಧಾಕೃಷ್ಣ, ಸಿಬ್ಬಂದಿ ನಾಗೇಶ್,ಐತ್ತಪ್ಪ, ಗೃಹರಕ್ಷಕದಳದ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ,ಸಾರ್ಜೆಂಟ್ ಜಗನ್ನಾಥ್, ಗೃಹರಕ್ಷಕದಳದ ಕೋವೀಡ್ ಮಾರ್ಷಲ್ ಕರ್ತವ್ಯ ದ ಉಪ್ಪಿನಂಗಡಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್.ಬಿ,ಸುಖಿತಾ ಶೆಟ್ಟಿ, ಪುತ್ತೂರು ಘಟಕದ ಗೃಹರಕ್ಷಕರಾದ ಚಂದ್ರಕುಮಾರ್,ಸಲಾವುದ್ದಿನ್,ಮುರಳಿ ಮೋಹನ್,ವೆಂಕಟೇಶ್ವರಿ ಉಪಸ್ಥಿತರಿದ್ದರು.