2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 13,24,205 ವಿವಿದ ರೀತಿಯ ವಿಕಲಚೇತನರು ಇದ್ದಾರೆ. ಈ ವಿಕಲಚೇತನ ಪಲಾನುಭವಿಗಳಿಗೆ ಪೂರಕವಾಗಿ ರಾಜ್ಯದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಡಿ ಸುಮಾರು 6,500 ವಿಕಲಚೇತನರು ಗೌರವಧನ ಆಧಾರದ ಮೇಲೆ ಕಾರ್ಯಕರ್ತರಾಗಿ ಇದ್ದುಕೊಂಡು ಸರಕಾರದ ಎಲ್ಲಾ ಯೋಜನೆಗಳನ್ನು ಸಂಬಂಧಿಸಿದ ವಿಕಲಚೇತನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಅತ್ಯಂತ ಶ್ರಮ ಪಟ್ಟು ಕಳೆದ 15 ವರ್ಷಗಳಿಂದಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ರಾಜ್ಯದ ಎಲ್ಲಾ 13,24,205 ವಿಕಲಚೇತನರು ಈ ಸಲದ ಬಜೆಟ್ ವಲ್ಲಿ ಅನೇಕ ನಿರೀಕ್ಷಣೆಗಳನ್ನು ಎದುರು ನೋಡುತ್ತಿದ್ದೇವು. ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಈ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಅಥವಾ ನಿಗಮ ವನ್ನು ಮಾಡಿಸಿ ಎಂದು ಕಳೆದ ಅನೇಕ ವರ್ಷಗಳಿಂದಲೂ ಬೇಡಿಕೆ ನೀಡಿದರೂ ಸಹ ಅದನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ದಾಕ್ಷಿಣ್ಯ ತೋರಿರುವುದು ಬೇಸರದ ವಿಷಯ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಉಜಿರೆಯ ಅಂಜನಾ ದೇವಿ ಅಭಿಪ್ರಾಯಿಸಿದ್ದಾರೆ.
ಈಗಿನ ಬೆಲೆ ಎರಿಕೆಯ ದಿನಗಳಲ್ಲಿ ಕನಿಷ್ಠ ಪಕ್ಷ ಬುದ್ದಿಮಾಂದ್ಯ ವಿಕಲಚೇತನರಿಗೆ ನೀಡಿರುವ ರೀತಿಯಲ್ಲಿ ಎಲ್ಲಾ ವಿಧಗಳ ವಿಕಚೇತನರನ್ನು ಪರಿಘಣನೆಗೆ ಪಡೆದು ಫೋಷಣ ಭತ್ಯೆ ಆದರೂ ಹೆಚ್ಚಿದ್ದಲ್ಲಿ ಸ್ವಲ್ಪ ಮಟ್ಟಿಗೆ ಸಮಧಾನವಾಗುತ್ತಿತ್ತು. ಇಂತಹ ಯಾವುದೇ ರೀತಿಯ ವಿಕಲಚೇತನರ ಅಭಿವೃದ್ಧಿಗಾಗಿ ಈ ಸಲದ ಬಜೆಟ್ ಪೂರಕವಾಗಿ ಇಲ್ಲದೆ ವಿಕಲಚೇತನರ ಜೀವನಕ್ಕೆ ಮಾರಕವಾಗಿ ಪರಿಣಮಿಸಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಈ ಬೇಡಿಕೆಗಳಿಗಾಗಿ ಪ್ರತಿಭಟನೆ ಮಾಡಿದರೆ ಯಾವುದೇ ತಪ್ಪಾಗಲಾರದು ಎಂದು ಅವರು ತಿಳಿಸಿದ್ದಾರೆ.