ಹೋರಾಟದ ಮೂಲಕವೇ ತಮ್ಮ ಹಿಂದುತ್ವದ ನಿಲುವನ್ನು ತೋರ್ಪಡಿಸುತ್ತಿರುವ ಹಿಂದೂ ಜಾಗರಣ ವೇದಿಕೆ ಕಾರಿಂಜ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಪುತ್ತೂರಿನಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.
ಪುತ್ತೂರು ತಾಲೂಕಿನ ಬೊಳ್ವಾರಿನಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವು ಅನ್ಯರ ವಶದಲ್ಲಿದ್ದು, ಈ ಜಾಗವನ್ನು ಮರಳಿ ಪಡೆದು ಹಿಂದೂ ಸಮಾಜದ ಉಪಯೋಗಕ್ಕೆ ಬಳಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ಹೋರಾಟಕ್ಕೆ ಸಜ್ಜಾಗಿದೆ.
ಬೊಳ್ವಾರಿನಲ್ಲಿ ಅನ್ಯರ ವಶದಲ್ಲಿರುವ ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಡುವಂತೆ ಕೋರ್ಟ್ ನಲ್ಲಿಯೂ ತೀರ್ಮಾನವಾಗಿದ್ದು, ಈ ಹಿನ್ನೆಲೆ ಮಾ.24ಕ್ಕೆ ಹಿಂದೂ ಜಾಗರಣ ವೇದಿಕೆ ಆ ಜಾಗದಲ್ಲಿ ಧಾರ್ಮಿಕ ಕಾರ್ಯಗಳನ್ನು ಹಾಗೂ ಧರ್ಮ ಸಭೆಯನ್ನು ನಡೆಸುವ ಬಗ್ಗೆ ಚಿಂತನೆ ನಡೆಸಿದೆ.
ಮಾ.24ಕ್ಕೆ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಗೆ ಗಣಹೋಮ, ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಅರ್ಧ ಏಕಾಹ ಭಜನೆ ಹಾಗೂ ಸಂಜೆ 5 ಗಂಟೆಯಿಂದ ಆಶ್ಲೇಷ ಬಲಿ ಪೂಜೆ ಮತ್ತು ಧರ್ಮ ಸಭೆ ನಡೆಯಲಿದೆ.
ಹಲವಾರು ದಶಕಗಳಿಂದ ಕೈ ತಪ್ಪಿ ಹೋಗಿರುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ಜಾಗವನ್ನು ಮರಳಿ ಪಡೆದು ಹಿಂದೂ ಸಮಾಜದ ಉಪಯೋಗಕ್ಕೆ ಬಳಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ಮತ್ತೊಂದು ಬೃಹತ್ ಹೋರಾಟಕ್ಕೆ ಸಜ್ಜಾಗಿದೆ..