ವಿಟ್ಲ: ದಿ. ವಿ. ಸುಬ್ರಾಯ ಶೆಟ್ಟಿಗಾರ್ ಹಾಗೂ ಕಲ್ಯಾಣಿ ವಿ. ಶೆಟ್ಟಿಗಾರ್ ದಂಪತಿಗಳ ಪುತ್ರನಾಗಿರುವ ಲೋಕರಾಜ್ ವಿಟ್ಲ ರವರು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ. ಪುರುಷೋತ್ತಮ ಗೌಡ ರವರ ಮಾರ್ಗದರ್ಶನದಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ ‘ಕಮ್ಯೂನಿಟಿ ಇನ್ಫಾರ್ಮೇಶನ್ ಸರ್ವಿಸಸ್ ಟು ದ ರೂರಲ್ ಪಾಪ್ಯುಲೇಸ್ ವಿದ್ ರೆಫೇರೆನ್ಸ್ ಟು ದಕ್ಷಿಣ ಕನ್ನಡ ಅಂಡ್ ಉಡುಪಿ ಡಿಸ್ಟಿಕ್ ( Community information services to the rural populace: A study with reference to dakshina Kannada and udupi disticts) ಎನ್ನುವ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಲೋಕರಾಜ್ ರವರು ಪ್ರಸ್ತುತ ದೇರೆಬೈಲ್ ಕೊಂಚಾಡಿ ನಿವಾಸಿಯಾಗಿದ್ದು, ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಟ್ಲ ಯುವಕ ಮಂಡಲ, ವೀರಭದ್ರ ಮಹಮ್ಮಾಯಿ ದೇವಸ್ಥಾನ, ಬಂಗ್ರಮಂಜೇಶ್ವರ ಹಾಗೂ ಪದ್ಮಶಾಲಿ ಸಮಾಜದ ವಿವಿಧ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರಿನ ಸಂತ ಆಲೋಶಿಯಸ್ ಕಾಲೇಜಿನ ಈಜು ಕೊಳದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ ವನ್ ಆಕ್ವಾ ಸೆಂಟರ್ ನಲ್ಲಿ ಈಜು ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ರಾಷ್ಟ್ರಮಟ್ಟದ ಈಜುಪಟುಗಳಿಗೆ ಕ್ರೀಡಾ ಈಜು ತರಬೇತಿಯನ್ನು ನೀಡುತ್ತಿದ್ದಾರೆ.