ಹಾಸನ: ಮೊಬೈಲ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿಗೆ ಹೃದಯಾಘಾತವಾಗಿ ಕೂತಲ್ಲೇ ಸಾವನ್ನಪ್ಪಿರೋ ಘಟನೆ ಹೊಳೆನರಸೀಪುರದ ಅರಣ್ಯ ಕಚೇರಿ ಬಳಿ ನಡೆದಿದೆ.
ಹೊಳೆನರಸೀಪುರ ಕಾರ್ಯಾಲಯ ಬಡಾವಣೆಯ ನಿವಾಸಿ ವಿರೂಪಾಕ್ಷ, ಅರಣ್ಯ ಕಚೇರಿಯ ಅಂಗಡಿ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ಹೃದಯಾಘಾತವಾಗಿ ಕೂತಲ್ಲಿ ಹಾಗೇ ಕುಸಿದು ಬಿದ್ದಿದ್ದಾರೆ.
ವಿರೂಪಾಕ್ಷ ನೋಡ, ನೋಡುತ್ತಿದ್ದಂತೆ ಕುಸಿದು ಬೀಳುವ ಭಯಾನಕ ದೃಶ್ಯ ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿರೂಪಾಕ್ಷ ಕುಸಿದು ಬೀಳುತ್ತಿದ್ದಂತೆ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ವಿರೂಪಾಕ್ಷ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.