ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ಬಜಾಲ್ ಪಡ್ಪು ನಿವಾಸಿ ತೌಸಿರ್ (ತೌಚಿ) (31), ಬಂಟ್ವಾಳ ಪುದು, ಪಾಡಿಮನೆ ಮಾರಿಪಳ್ಳ ನಿವಾಸಿ ಯಾಸೀನ್ (27) ಬಂಧಿತ ಆರೋಪಿಗಳು.

ಬಂಧಿತರಿಂದ 50,000 ರೂ. ಮೌಲ್ಯದ 905 ಗ್ರಾಂ. ಗಾಂಜಾ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.