ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನವರು 14 ದಿನಗಳ ಜನತಾ ಕರ್ಫ್ಯೂ ವನ್ನು ಘೋಷಿಸಿದ್ದಾರೆ. ಇದು ತುಂಬಾ ಅಗತ್ಯ ಹಾಗೂ ಸೂಕ್ತ ನಿರ್ಧಾರ, ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹೊಸರೂಪಗೊಂಡು ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜೀವವನ್ನು ಉಳಿಸುವುದಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ.
ಪುತ್ತೂರಿನಲ್ಲಿ ಕೂಡ ಶಾಸಕರರಾದ ಸಂಜೀವ ಮಠಂದೂರು ರವರ ನೇತೃತ್ವದಲ್ಲಿ ಕೊರೊನಾ ಎದುರಿಸಲು ವಾರ್ ರೂಂ ಅನ್ನು ನಿರ್ಮಿಸಲಾಗಿದೆ. ಪುತ್ತೂರಿನ ಜನರಲ್ಲಿ ವಿನಂತಿ ಯಾವುದೇ ಸಮಸ್ಯೆ ಬಂದಲ್ಲಿ ಜನ ಪ್ರತಿನಿಧಿಗಳು ಅಥವಾ ವಾರ್ ರೂಂ ಗಳನ್ನು ಸಂಪರ್ಕಿಸಿ ನಿಮಗೆ ಬೇಕಾದ ಸಹಾಯವನ್ನು ಒದಗಿಸಿಕೊಡಲು ಸಂಪೂರ್ಣ ಪ್ರಯತ್ನಕ್ಕೆ ನಮ್ಮ ಇಡೀ ತಂಡ ಸಜ್ಜಾಗಿದೆ. ಭಯ ಪಡುವ ಅವಶ್ಯಕತೆ ಇಲ್ಲ, ಧೈರ್ಯದಿಂದ ಇರಿ, ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿರುವುದು ನಮ್ಮ ಜವಾಬ್ದಾರಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕೊರೊನಾವನ್ನು ದೂರವಿಡಲು ಒಂದೇ ಒಂದು ಅಸ್ತ್ರವಾಗಿದೆ ಎಂಬುವುದರಲ್ಲಿ ಸಂಶಯವಿಲ್ಲ. ವ್ಯಾಕ್ಸಿನ್ ತಪ್ಪದೇ ಹಾಕಿಸಿ ಇದರ ಬಗ್ಗೆ ಯಾವುದೇ ನಿರ್ಲಕ್ಷ ಅಥವಾ ಭಯ, ಸಂಶಯ ಬೇಡ ಇದು ನಮ್ಮ ರಕ್ಷಣೆಗೆ ಇರುವಂತದ್ದು.
ಯುವಕರಲ್ಲಿ ವಿನಂತಿ ರಕ್ತದಾನ ಮಾಡಿ ಜೀವ ಉಳಿಸುವುದು ನಿಮ್ಮ ಕೈಯಲ್ಲಿದೆ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿರುವ ಎಲ್ಲಾ ರೀತಿಯ ಜನರಿಗೆ ಸ್ಪಂದಿಸುವುದು, ಸಹಾಯ ಮಾಡುವುದು ಅಥವಾ ಅವರಿಗೆ ಧೈರ್ಯ ತುಂಬುವ ಅವಶ್ಯಕತೆಯಿದೆ. ಹಿರಿಯ ನಾಗರಿಕರು, ಅಸಕ್ತರ ಕಡೆ ನಮ್ಮ ಗಮನ ಹೆಚ್ಚಾಗಬೇಕಾಗಿದೆ.ಅವರಿಗೇ ಬೇಕಾಗುವ ಅಗತ್ಯ ವಸ್ತುಗಳಾಗಲಿ, ಔಷಧಿಯಾಗಲಿ, ವೈದ್ಯಕೀಯ ಸಲಹೆಗಳಾಗಲಿ ಇವೆಲ್ಲಾ ಕೂಡ ಅವರ ಮನೆಗೆ ಮುಟ್ಟಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ.
ಬಡವರ ಕಷ್ಟಕ್ಕೆ ಹೆಚ್ಚಿನ ಸ್ಪಂದನೆ ಬೇಕಾಗಿದೆ. ಸರ್ಕಾರ ಅವರಿಗೇ ಹಿಂದೆ ಕೂಡ ಸ್ಪಂದಿಸಿದೆ ಮುಂದೆ ಕೂಡ ಸ್ಪಂದಿಸುತ್ತದೆ ಎಂಬ ಭರವಸೆ ಇದೆ. ಪರಿಸ್ಥಿತಿಯನ್ನು ಮಂದಿಟ್ಟುಕೊಂಡು ರಾಜಕೀಯ ಮಾಡುವ ಸಮಯವಲ್ಲ ಒಂದಾಗಿ ಎಲ್ಲರೂ ಕೊರೊನಾ ಮಹಾಮಾರಿಯನ್ನು ಎದುರಿಸುವುದು, ಜಯಿಸುವುದು ಈಗ ಮುಖ್ಯವಾಗಿದೆ.
ವಿದ್ಯಾ ಆರ್ ಗೌರಿ
ಉಪಾಧ್ಯಕ್ಷರು , ನಗರ ಸಭೆ ಪುತ್ತೂರು