ಪುತ್ತೂರು: ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆ ಸೇರಿದಂತೆಇನ್ನಿತರ ಹಲವು ಕಾಯ್ದೆಗಳಿಗೆ ತಿದ್ದುಪಡಿಯೊಂದಿಗೆ ಮಾರುಕಟ್ಟೆ ಶುಲ್ಕವನ್ನು ೩೫ ಪೈಸೆಗೆ ಇಳಿಸಿದ್ದು ಎಪಿಎಂಸಿ ಆದಾಯ ಸಂಗ್ರಹದಲ್ಲಿ ಭಾರೀ ಇಳಿಕೆಯಾಗಿದೆ. ಆದ್ದರಿಂದ ಬೇರೆ ಬಗೆಯಲ್ಲಿತೆರಿಗೆ ಸಂಗ್ರಹದ ಮುಖಾಂತರಆದಾಯ ಹೆಚ್ಚಳದ ಕುರಿತುಚಿಂತನೆ ನಡೆಸಲಾಗಿದೆಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.
ಅ.28 ರಂದು ನಡೆದ ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆಯಅಧ್ಯಕ್ಷತೆ ವಹಿಸಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆತಿದ್ದುಪಡಿತರುವ ಮೊದಲುರಾಜ್ಯದಎಲ್ಲಾ ಎಪಿಎಂಸಿಗಳಿಗೆ1.50 ರೂಪಾಯಿಯಂತೆ ಮಾರುಕಟ್ಟೆ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಆದರೆಆಗಸ್ಟ್ ತಿಂಗಳಲ್ಲಿ ಸುಗ್ರೀವಾಜ್ಞೆಜಾರಿ ಮಾಡಿ ಮಾರುಕಟ್ಟೆ ಶುಲ್ಕ35 ಪೈಸೆಯಂತೆ ಸಂಗ್ರಹಿಸಲು ಆದೇಶಿಸಿದೆ. ಇದರಿಂದಾಗಿ ಎಪಿಎಂಸಿ ಆದಾಯ ಇಳಿಕೆಯಾಗಿದೆ ಎಂದು ತಿಳಿಸಿದರು. ಪುತ್ತೂರು ಎಪಿಎಂಸಿಯಲ್ಲಿ ಜುಲೈ ತಿಂಗಳಲ್ಲಿ 80 ಲಕ್ಷರೂಪಾಯಿಆದಾಯ ಸಂಗ್ರಹವಾಗಿದ್ದು, ಆಗಸ್ಟ್ನಲ್ಲಿ ರೂ.30 ಲಕ್ಷ, ಸೆಪ್ಟೆಂಬರ್‌ನಲ್ಲಿ ರೂ.23 ಲಕ್ಷಕ್ಕೆ ಇಳಿಕೆಯಾಗಿದೆ. ಅಕ್ಟೋಬರ್‌ನಲ್ಲಿ ರೂ.12 ಲಕ್ಷಆದಾಯ ಸಂಗ್ರಹದ ನಿರೀಕ್ಷೆಯಿದೆ. ಈಗ 35 ಪೈಸೆಯಂತೆ ಮಾರುಕಟ್ಟೆ ಶುಲ್ಕ ಸಂಗ್ರಹ ಮತ್ತು ಬಾಡಿಗೆಯಿಂದ ಮಾತ್ರಆದಾಯ ಬರುವುದರಿಂದ ಮುಂದಿನ ದಿನಗಳಲ್ಲಿ ಹೇಗೆ ಆದಾಯ ಹೆಚಿಸಬಹುದೆಂಬ ಬಗ್ಗೆ ಚರ್ಚೆ ನಡೆಯಿತು.
![](https://zoomintv.online/wp-content/uploads/2020/10/WhatsApp-Image-2020-10-29-at-3.11.47-PM-1024x576.jpeg)
ಹೊರಗುತ್ತಿಗೆ ನೌಕರರ ಸಂಖ್ಯೆ ಶೇ.50 ಕ್ಕೆ ಇಳಕೆ: ಕಾಯ್ದೆತಿದ್ದುಪಡಿ ನಂತರಆದಾಯದಲ್ಲಿ ಭಾರೀ ಇಳಿಕೆಯಾಗಿದ್ದು ಎಪಿಎಂಸಿ ನಿರ್ವಹಣೆಗೆ ವೆಚ್ಚ ಹೊಂದಿಸುವುದುಕಷ್ಟವಾಗಲಿದೆ. ಹಾಗಾಗಿ ಎಪಿಎಂಸಿಯಲ್ಲಿರುವ ಹೊರಗುತ್ತಿಗೆ ನೌಕರರ ಸಂಖ್ಯೆಯನ್ನು ಶೇ.50 ಕ್ಕೆ ಇಳಿಸುವ ಬಗ್ಗೆ ಇಲಾಖೆಯಿಂದಆದೇಶ ಬಂದಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಎಪಿಎಂಸಿ ನಿರ್ದೇಶಕ ಬುಡಿಯಾರ್‌ರಾಧಾಕೃಷ್ಣರೈ ಮಾತನಾಡಿ ಈಗಾಗಲೇ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ, ಹಾಗಿರುವಾಗಇರುವ ಸಿಬ್ಬಂದಿಗಳನ್ನು ಕೆಲಸದಿಂದತೆಗೆಯಲು ಸಾಧ್ಯವಿಲ್ಲ ಎಂದರು. ಈ ಬಗ್ಗೆ ಎಪಿಎಂಸಿ ಡೈರೆಕ್ಟರ್‌ಜೊತೆ ಮಾತನಾಡುವುದಾಗಿಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.
![](https://zoomintv.online/wp-content/uploads/2020/10/WhatsApp-Image-2020-10-29-at-3.11.47-PM-1-1024x576.jpeg)
ಎಪಿಎಂಸಿ ಯಾರ್ಡ್ನಲ್ಲಿ ಮಾತ್ರತೆರಿಗೆ: ಎಪಿಎಂಸಿ ನಿರ್ದೇಶಕಅಬ್ದುಲ್ ಹಾಜಿ ಮಾತನಾಡಿ, ಹೊಸ ಕಾಯ್ದೆ ಪ್ರಕಾರ ಎಪಿಎಂಸಿಯಿ0ದ ಹೊರಗೆ ವ್ಯಾಪಾರ ಮಾಡಿದರೆತೆರಿಗೆಇಲ್ಲ. ಯಾರ್ಡ್ನ ಒಳಗೆ ವರ್ತಕರತೆರಿಗೆ ಇರುವುದರಿಂದ ತೊAದರೆಯಾಗಿತ್ತಿದೆ ಎ0ದರು. ಇದಕ್ಕೆಉತ್ತರವಾಗಿ ಅಧ್ಯಕ್ಷರು ಲೈಸೆನ್ಸ್ ಹೊಂದಿದವರು ತೆರಿಗೆ ಕೊಡಲೇ ಬೇಕು. ಬೆಳ್ತಂಗಡಿ ಎಪಿಎಂಸಿಯಲ್ಲಿ ಹೊರಗಡೆ ವ್ಯಾಪಾರ, ಪುತ್ತೂರು ಎಪಿಎಂಸಿ ಮತ್ತು 5 ಉಪ ಮಾರುಕಟ್ಟೆಯಲ್ಲಿ ಉತ್ತಮ ರೀತಿಯಲ್ಲಿ ವ್ಯವಹಾರ ನದೆಯುತ್ತಿದೆ ಎಂದರು.ಗ್ರಾಮೀಣ ಸಂತೆ ಮಾರುಕಟ್ಟೆಗೆ ರೂ.1 ಕೋಟಿ ಮಂಜೂರು: ಎಪಿಎಂಸಿ ಮೂಲಕ ಸವಣೂರಿನಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆಗೆ ರೂ.1 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಈಗ ಮಂಜೂರಾತಿ ಸಿಕ್ಕಿದ್ದು ಶೀಘ್ರವಾಗಿ ಕಾರ್ಯ ಚಟುವಟಿಕೆಗಳು ನಡೆಯಲಿವೆ ಎಂದುಅಧ್ಯಕ್ಷ ದಿನೇಶ್ ಮೆದು ತಿಳಿಸಿದರು. ಅದಲ್ಲದೆ ನಬಾರ್ಡ್ನ ರೂ.100 ಕೋಟಿ ಪ್ರಸ್ತಾವನೆ ಬರೆಯಲಾಗಿದ್ದು ಅದನ್ನು ಮುಂದಿನ ಅವಧಿಯಲ್ಲಿ ಮಂಜೂರಾತಿ ಮಾಡುವಕುರಿತುಒತ್ತಡತರಲಾಗುವುದೆಂದು ತಿಳಿಸಿದರು.ಮೂಲಭೂತ ಸೌಕರ್ಯಇಲಾಖೆಯಿಂದರೈಲೈಅAಡರ್ ಪಾಸ್‌ಕಡತ: ಎಪಿಎಂಸಿ ರಸ್ತೆಯಲ್ಲಿ ನಿರ್ಮಾಣವಾಗಬೇಕಿರುವ ಬಹುಬೇಡಿಕೆಯ ರೈಲೈಅಂಡರ್ ಪಾಸ್ ಯೋಜನೆ ಕುರಿತಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸಂಜೀವ ಮಠಂದೂರು, ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸಭೆ ನಡೆಸಿ ರೂ.5 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದೀಗ ಕಡತ ಅಂತಿಮ ಹಂತದಲ್ಲಿದೆ ಎ0ದು ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು.ಟಿಎಪಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಗೆ ಅಭಿನ0ದನೆ: ಕೂರ್ನಡ್ಕ ದಲ್ಲಿರುವ ತಾಲೂಕು ಕೃಷಿ ಮಾರಾಟ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಎಪಿಎಂಸಿ ನಿರ್ದೇಶಕ ಕೃಷ್ಣಕುಮಾರ್‌ರೈ ಅವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಎಪಿಎಂಸಿ ಉಪಾಧ್ಯಕ್ಷಎನ್.ಎಸ್ ಮಂಜಜುನಾಥ, ನಿರ್ದೇಶಕರಾದ ಬುಡಿಯಾರ್‌ರಾಧಾಕೃಷ್ಣ ರೈ, ಮೇದಪ್ಪ, ತ್ರಿವೇಣಿ ಪರ‍್ವೋಡಿ, ಪುಲಸ್ತಾö್ಯರೈ, ಕಾರ್ತಿಕ್‌ರೈ ಬೆಳ್ಳಿಪ್ಪಾಡಿ, ಕೃಷ್ಣಕುಮಾರ್‌ರೈ, ಅಬ್ದುಲ್ ಹಾಜಿ, ಕೊರಗಪ್ಪ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಬು, ಬಾಲಕೃಷ್ಣ ಜೋಯಿಷಾ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿರಾಮಚಂದ್ರ ಸಭಾ ನಡಾವಳಿ ಸಡೆಸಿದರು.